March 21, 2026

ಕಾರ್ಕಳ: ಮನೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ: ಕರ್ತವ್ಯ ನಿಷ್ಠೆ ಮೆರೆದ 108 ಸಿಬ್ಬಂದಿ

0
IMG-20240204-WA0000.jpg



ಕಾರ್ಕಳ,: ಗರ್ಭಿಣಿಯೊಬ್ಬರು ಮನೆಯಲ್ಲೇ ಮಗುವೊಂದಕ್ಕೆ ಜನ್ಮ ನೀಡಿದ ಘಟನೆ ಇಂದು ಕಾರ್ಕಳದ ಕಡ್ತಲ ಸಮೀಪದ ಎಳ್ಳಾರೆ ಎಂಬಲ್ಲಿ ನಡೆದಿದೆ.


ಕಾರ್ಕಳದ ಕಡ್ತಲ ಸಮೀಪದ ಎಳ್ಳಾರೆ ನಿವಾಸಿ ಲಕ್ಷ್ಮೀ ಮಗುವಿಗೆ ಜನ್ಮ ನೀಡಿದವರು.

ಲಕ್ಷ್ಮೀ ಅವರು ಫೆ.04 ರ ಪೂರ್ವಾಹ್ನ 11.30ರ ವೇಳೆಗೆ ತೀವ್ರದಲ್ಲಿ ಪ್ರಸವ ವೇದನೆಯಿಂದ ಬಳಲುತ್ತಿದ್ದಾರೆಂಬ ಮಾಹಿತಿ ಪಡೆದ 108 ಅಂಬ್ಯುಲೆನ್ಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿದರು.

ಅದಾಗಲೇ ಗರ್ಭಿಣಿ ಸಾಮಾನ್ಯ ಹೆರಿಗೆಯೊಂದಿಗೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದರು.

ಬಾಣಂತಿ ಲಕ್ಷ್ಮೀ ಹಾಗೂ ಮಗು ಆರೋಗ್ಯ ವಂತರರಾಗಿದ್ದು, ಉಡುಪಿಯ ಸರಕಾರಿ ಮಹಿಳಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು 108 ಅಂಬ್ಯುಲೆನ್ಸ್ ಇಎಂಟಿ ಮಂತೇಶ್, ಪೈಲಟ್ ಪ್ರಕಾಶ್ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!