ಫಿಟ್ನೆಸ್ ತರಬೇತುದಾರ ಹೃದಯಾಘಾತದಿಂದ ಮೃತ್ಯು
ಬೆಂಗಳೂರು: ದೈಹಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದ ಫಿಟ್ನೆಸ್ ತರಬೇತುದಾರ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
45 ವಯಸ್ಸಿನ ಸೈಕ್ಲಿಸ್ಟ್, ಫಿಟ್ನೆಸ್ ತರಬೇತುದಾರ ಅನೀಲ್ ಕಡ್ಸೂರ್ ಶುಕ್ರವಾರ ಬೆಳಗ್ಗೆ ಹೃದಯಘಾತದಿಂದ ನಿಧನರಾದರು. ತೀವ್ರ ಅಸ್ವಸ್ಥರಾಗಿದ್ದ ಅನೀಲ್‌ರನ್ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.




