December 15, 2025

ಪೊಲೀಸ್ ಠಾಣೆಯಿಂದಲೇ  ಕಳ್ಳತನದ ಆರೋಪಿ ಎಸ್ಕೇಪ್

0
image_editor_output_image-593777944-1706862868385.jpg

ತುಮಕೂರು: ಪೊಲೀಸ್ ಠಾಣೆಯಿಂದಲೇ ಕಳ್ಳತನದ ಆರೋಪಿಯೊಬ್ಬ ಕಾಣೆಯಾಗಿರುವ ಘಟನೆ ಗೃಹ ಸಚಿವರ ತವರು ಜಿಲ್ಲೆಯಲ್ಲೇ ನಡೆದಿದೆ.

ಜಿಲ್ಲೆಯ ಗುಬ್ಬಿ ಪೊಲೀಸ್ ಠಾಣೆಯಿಂದ ಎಸ್ಕೆಪ್ ಆದ ಆರೋಪಿ ಸೈಯದ್ ಎಂದು ತಿಳಿದು ಬಂದಿದೆ.

ಕಳ್ಳತನದ ಅಡಿಯಲ್ಲಿ ಆರೋಪಿಯನ್ನು ಸಿಆರ್ ನಂ. 13/2024 ರ ಪ್ರಕರಣದಲ್ಲಿ ಕರೆತಂದಿದ್ದು, ಆರೋಪಿಯನ್ನು ಬಂಧಿಸಿ ಠಾಣೆಯಲ್ಲಿ ಇಡಲಾಗಿತ್ತು. ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿ ಗುಬ್ಬಿ ಠಾಣೆಗೆ ಕರೆತಂದಿದ್ದರು ಎಂದು ತಿಳಿದು ಬಂದಿದೆ.

ಶುಕ್ರವಾರ ಬೆಳಗ್ಗೆ ಸುಮಾರು 4. 30 ರ ಸಮಯದಲ್ಲಿ ಠಾಣೆಯಿಂದ ಆರೋಪಿ ಪರಾರಿಯಾಗಿದ್ದಾರೆ ಎನ್ನಲಾಗಿದೆ

Leave a Reply

Your email address will not be published. Required fields are marked *

You may have missed

error: Content is protected !!