March 21, 2026

ಮಂಗಳೂರು: ಎಂಡಿಎಂಎ ಮಾರಾಟ: ಓರ್ವ ಪೊಲೀಸರ ವಶಕ್ಕೆ

0
image_editor_output_image-2125223723-1706797455184.jpg

ಮಂಗಳೂರು: ನಿಷೇಧಿತ ಮಾದಕ ವಸ್ತುವಾದ ಮೆಥಾಂಫೆಟಮೈನ್ (ಎಂಡಿಎಂಎ) ನ್ನು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಯುವಕನನ್ನು ಫೆ.1ರಂದು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೊಹಮ್ಮದ್‌ ಫರಾಜ್ ಎಂದು ಗುರುತಿಸಲಾಗಿದೆ. ಈತ ನಗರದ ಮೇರಿಹೀಲ್ ಹೆಲಿಪ್ಯಾಡ್ ಬಳಿ ನಿಷೇಧಿತ ಮಾದಕ ವಸ್ತುಎಂಡಿಎಂಎ ನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಮಂಗಳೂರು ಉತ್ತರ ಉಪ ವಿಭಾಗದ ಡ್ರಗ್ಸ್ ಸ್ಕ್ವಾಡ್ ಸಿಬ್ಬಂದಿಗಳು ಮತ್ತು ಕಾವೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯಿಂದ 30,000 ರೂ ಮೌಲ್ಯದ 7.28 ಗ್ರಾಂ ನಷ್ಟು ಮೆಥಾಎಂಪೆಟಮೈನ್ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!