March 18, 2026

ವಿಟ್ಲ: ಕುಡಿದು ಮಲಗಿದ್ದ ವ್ಯಕ್ತಿ ಮೃತ್ಯು

0
image_editor_output_image-1741830680-1706633035245.jpg

ವಿಟ್ಲ: ಕುಡಿದು ಮಲಗಿದ ವ್ಯಕ್ತಿಯೋರ್ವರು ಅಲ್ಲಿಯೇ ಮೃತಪಟ್ಟ ಘಟನೆ ವಿಟ್ಲದ ವಿಜಯ ಹೋಟೆಲ್ ಸಮೀಪ ನಡೆದಿದೆ.

ಮೃತರನ್ನು ಮೂಲತಃ ಸಜೀಪ ನಿವಾಸಿ, ಪ್ರಸ್ತುತ ಕಾಶೀಮಠದಲ್ಲಿರುವ ಸಂದೀಪ್ ಭಂಡಾರಿ (42) ಎಂದು ಗುರುತಿಸಲಾಗಿದೆ.

ಸಂದೀಪ್ ಕೂಲಿ ಕೆಲಸ ಮಾಡುತ್ತಿದ್ದು, ವಿಪರೀತ ಕುಡಿತದ ಚಟ ಹೊಂದಿದ್ದರೆನ್ನಲಾಗಿದೆ. ಅನಾರೋಗ್ಯದಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮನೆಯವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!