RSS ಕಾರ್ಯಕರ್ತ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣ: ಪಿಎಫ್‌ಐನ 15 ಮಂದಿ ಕಾರ್ಯಕರ್ತರಿಗೆ ಮರಣದಂಡನೆ ಶಿಕ್ಷೆ
ತಿರುವನಂತಪುರಂ: ರಾಷ್ಟ್ರೀಯ ಸ್ವಯಂ ಸೇವಕ (ಆರ್ ಎಸ್ ಎಸ್) ಸಂಘದ ಕಾರ್ಯಕರ್ತ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದಲ್ಲಿ ದೋಷಿತರಾಗಿದ್ದ ಎಸ್ ಡಿಪಿಐ ಮತ್ತು ಪಿಎಫ್ ಐನ 15 ಮಂದಿ ಕಾರ್ಯಕರ್ತರಿಗೆ ಕೇರಳದ ಆಲಪುಳ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿ ಮಂಗಳವಾರ (ಜನವರಿ 30) ತೀರ್ಪು ಪ್ರಕಟಿಸಿದೆ.
2021ರ ಡಿಸೆಂಬರ್ 19ರಂದು ಬಿಜೆಪಿಯ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ, ಆರ್ ಎಸ್ ಎಸ್ ಕಾರ್ಯಕರ್ತ ಶ್ರೀನಿವಾಸನ್ ಅವರನ್ನು ಮನೆಯಲ್ಲೇ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಹತ್ಯೆಗೈಯ್ಯಲಾಗಿತ್ತು.
ಎಸ್ ಡಿಪಿಐ ಮುಖಂಡ ಕೆಎಸ್ ಶಾನ್ ಡಿಸೆಂಬರ್ 18ರ ರಾತ್ರಿ ಆಲಪುಳದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಗುಂಪೊಂದು ದಾಳಿ ನಡೆಸಿ ಕೊಲೆಗೈದಿದ್ದ ಕೆಲವೇ ಗಂಟೆಗಳ ನಂತರ ಆರ್ ಎಸ್ ಎಸ್ ಕಾರ್ಯಕರ್ತ ಶ್ರೀನಿವಾಸನ್ ಅವರ ಕೊಲೆ ಘಟನೆ ನಡೆದಿತ್ತು.




