February 1, 2026

ಬಂಟ್ವಾಳ: ಫ್ಲೈವುಡ್ ಫ್ಯಾಕ್ಟರಿಗೆ ಬೆಂಕಿ: 2 ಲಕ್ಷ ರೂ. ನಷ್ಟ

0
image_editor_output_image-1799187035-1706592327394.jpg

ಬಂಟ್ವಾಳ: ಸಜೀಪ ಸಮೀಪದ ಕೋಟೆಕಣಿಯಲ್ಲಿ ಫ್ಲೈವುಡ್ ಫ್ಯಾಕ್ಟರಿಗೆ ಬೆಂಕಿ ತಗಲಿ ಸುಮಾರು 2 ಲಕ್ಷ ರೂ. ನಷ್ಟ ಉಂಟಾದ ಘಟನೆ ಸೋಮವಾರ ನಡೆದಿದೆ.

ಬಂಟ್ವಾಳ ಹಾಗೂ ಪಾಂಡೇಶ್ವರ ಅಗ್ನಿಶಾಮಕ ವಾಹನಗಳು ತೆರಳಿ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ.

ಶಬೀರ್ ಅವರಿಗೆ ಸೇರಿದ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ಮರದ ಅವಶೇಷ ರಾಶಿ ಹಾಕಿದ್ದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಾಜ, ಬಂಟ್ವಾಳ ಅಗ್ನಿಶಾಮಕ ಠಾಣೆಯ ಸಿಬಂದಿ ಚಂದ್ರಕಾಂತ, ಪುರುಷೋತ್ತಮ, ರಾಜೇಶ್ ಶೆಟ್ಟಿ, ಕಿರಣ್ ಕುಮಾರ್, ರುಕ್ಕಯ್ಯ ಅಮೀನ್, ಕೆ.ಸುರೇಂದ್ರ, ನಾಗರಾಜ್, ಜಾಂಟಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!