February 4, 2026

ಉಡುಪಿ: ಅಪರಿಚಿತ ವಾಹನ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
 

0
hr-070123-accident1.jpg


ಉಡುಪಿ,: ಬೈಕೊಂದು ಅಫಘಾತಕ್ಕೀಡಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿಯ ಜಿಲ್ಲೆಯ ಕಟಪಾಡಿ-ಶಿರ್ವ ಮುಖ್ಯರಸ್ತೆಯ ಬಂಟಕಲ್ಲು ಅರಸೀಕಟ್ಟೆಯ ಬಳಿ ಗುರುವಾರ ನಡೆದಿದೆ.

ಮೃತ ಬೈಕ್ ಸವಾರನನ್ನು ದರ್ಶನ್ (24 ) ಎಂದು ಗುರುತಿಸಲಾಗಿದೆ.

ಮೂಲತಃ ಕಾರವಾರದವರಾದ ದರ್ಶನ್ ಅವರು ಕಟಪಾಡಿ ಸಮೀಪದ ಶಂಕರಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು ಎನ್ನಲಾಗಿದೆ.

ಕೆಲವೇ ದಿನಗಳ ಹಿಂದೆ ಇದೇ ಯುವಕ ಬೈಕ್ ಅಫಘಾತದಲ್ಲಿ ಕೈ ಮೂಳೆ ಮುರಿತಕ್ಕೆ ಒಳಗಾಗಿ ಮನೆಯಲ್ಲಿದ್ದರು ಅನ್ನುವ ಮಾಹಿತಿ ಇದೆ.

ಇನ್ನು ಯಾವುದೋ ಅಪರಿಚಿತ ವಾಹನ ಈತನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದ್ದರಿಂದ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಶಿರ್ವ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!