May 6, 2026

ರಾಮ ಮಂದಿರ ಪೂಜೆಗೆ ಮೊದಲು ಅವಕಾಶ ಮಾಡಿಕೊಟ್ಟಿದ್ದೇ ಕಾಂಗ್ರೆಸ್: ಸಚಿವ ರಾಮಲಿಂಗಾರೆಡ್ಡಿ

0
image_editor_output_image1087935432-1706000238191.jpg

ಬೆಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 1985 ರಲ್ಲಿ ಅಯೋಧ್ಯೆ ರಾಮಮಂದಿರದ ಬಾಗಿಲು ತೆಗೆಸಿದ್ದರು. ರಾಮ ಮಂದಿರ ಪೂಜೆಗೆ ಮೊದಲು ಅವಕಾಶ ಮಾಡಿಕೊಟ್ಟಿದ್ದೇ ರಾಜೀವ್ ಗಾಂಧಿ. ಇದರ ಬಗ್ಗೆ ಎಲ್ಲರಿಗೂ ಜಾಣ ಮರೆವು ಯಾಕೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ರಾಮಾಯಣ ನಡೆದು ಐದಾರು ಸಾವಿರ ವರ್ಷಗಳಾಯಿತು. ಇಷ್ಟು ವರ್ಷಗಳಲ್ಲಿ ಲಕ್ಷಾಂತರ ದೇವಸ್ಥಾನದ ನಿರ್ಮಾಣವಾಗಿದೆ. ಶ್ರೀರಾಮ ಎಲ್ಲರಿಗೂ ಆಶೀರ್ವಾದ ಮಾಡಲಿ ಎಂದರು.

ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ಸೂಚನೆ ನೀಡಿದ್ದೆವು. ಬಿಜೆಪಿ ನಾಯಕರು ಹೇಳದೆಯೇ ಪೂಜೆಗೆ ಆದೇಶ ನೀಡಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!