March 20, 2026

ಮಂಗಳೂರು: ಕಾರಿನ ಗ್ಲಾಸ್ ಗೆ ಹೆಲ್ಮೆಟ್ ನಿಂದ ಹೊಡೆದ ಯುವಕ

0
image_editor_output_image-1336882647-1705993646841.jpg

ಮಂಗಳೂರು: ನಿಧಾನಗತಿಯಲ್ಲಿ ಸಾಗುತ್ತಿದ್ದ ಕಾರೊಂದರ ಗ್ಲಾಸ್ ಗೆ ಯುವಕನೊಬ್ಬ ತನ್ನ ಹೆಲ್ಮೆಟ್ ನಿಂದ ಹೊಡೆದು ಹಾನಿ ಮಾಡಿದ ಘಟನೆ ಸೋಮಾವಾರ ಸಂಜೆ ಮಂಗಳೂರಿನ ಪಂಪ್ವೆಲ್ ನಲ್ಲಿ ನಡೆದಿದೆ.

ಕಾರು ನಿಧಾ‌ನವಾಗಿ ಚಲಾಯಿಸುತ್ತಿದ್ದ ಕಾರಣ ಕಾರನ್ನು ಹಿಂದೆ ಹಾಕಿ ಮುಂದೆ ಹೋಗಲೂ ಅಸಾದ್ಯವಾಗಿದ್ದ ಕಾರಣ ಯುವಕ ಅಸಹನೆಗೊಂಡಿದ್ದ.

ಸ್ವಲ್ಪ ಸಮಯ ಹಿಂದಿನಿಂದಲೇ ಹೋಗಿದ್ದ ಯುವಕ ಒಂದು ಜಾಗದಲ್ಲಿ ಕಾರನ್ನು ಓವರ್ ಟೇಕ್ ಮಾಡಿದ್ದ. ಕಾರ್ ಒವರ್ ಟೇಕ್ ಮಾಡಿ ಮುಂದೆ ಸಾಗುತ್ತಿದ್ದಂತೆ ತನ್ನ ಹೆಲ್ಮೆಟ್ ನಿಂದ ಕಾರಿನ ಗ್ಲಾಸ್ ಗೆ ಹೊಡೆದಿದ್ದು ಕಾರಿನ ಗಾಜಿಗೆ ಹಾನಿಯಾಗಿದೆ.

ಈ ವೇಳೆ ಕಾರ್ ಹಾಗೂ ಬೈಕ್ ಸವಾರನ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಾರ್ವಜನಿಕರೂ ಜಮಾಯಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ಚದುರಿಸಿ ಕಾರ್ ಚಾಲಕನ ದೂರು ಆಲಿಸಿದ್ದಾರೆ.

ಆದರೆ ಕಾರು ಚಾಲಕ ಕಾರಿಗೆ ಹಾನಿ ಮಾಡಿದ ಯುವಕ ಮೇಲೆ ಯಾವೂದೇ ದೂರು ನೀಡದೆ ತೆರಳಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!