March 21, 2026

ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ:
ಕೇರಳದ ಮೂಲದ ಒಂದೇ ಕುಟುಂಬದ ಐವರು ಮೃತ್ಯು

0
image_editor_output_image-1579636719-1638622463009

ರಿಯಾದ್: ವಾಹನ ಅಪಘಾತದಲ್ಲಿ ಕೇರಳ ಮೂಲದ ಒಂದೇ ಕುಟುಂಬದ ಐವರು ಮೃತಪಟ್ಟ ದಾರುಣ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

ಮೃತಪಟ್ಟವರನ್ನು ಕೇರಳದ ಕಲ್ಲೀಕೋಟೆಯ ಬೇಪೋರ್‌ ಮೂಲದ ಮುಹಮ್ಮದ್‌ ಜಾಬೀರ್‌, ಅವರ ಪತ್ನಿ ಹಾಗೂ ಮೂವರು ಮಕ್ಕಳು ಎಂದು ಗುರುತಿಸಲಾಗಿದೆ.

ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಐವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸೌದಿ ಅರೇಬಿಯಾದ ಬಿಶಾ ಸಮೀಪದ ಅಲ್ ರೈನ್ ಜನರಲ್ ಆಸ್ಪತ್ರೆಯಲ್ಲಿ ಮೃತದೇಹವನ್ನು ಇಡಲಾಗಿದೆ.

ಮುಹಮ್ಮದ್ ಜಾಬೀರ್ ಟೊಯೊಟಾ ಕಂಪನಿಯ ಉದ್ಯೋಗಿಯಾಗಿದ್ದರು. ಅವರು ಜುಬೈಲ್‌ ನಿಂದ ಜಿಸಾನ್‌ ನಲ್ಲಿರುವ ಅಬ್ದುಲ್ ಲತೀಫ್ ಕಂಪನಿಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!