ಭಾರತ – ನ್ಯೂಝಿಲೆಂಡ್ ಎರಡನೇ ಟೆಸ್ಟ್:
62 ರನ್ ಗಳಿಗೆ ನ್ಯೂಝಿಲೆಂಡ್ ಆಲೌಟ್
ಮುಂಬೈ: ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಬೌಲರ್ ಗಳು ಭಾರಿ ಮೇಲುಗೈ ಸಾಧಿಸಿದ್ದಾರೆ. ಮೊದಲು ನ್ಯೂಜಿಲ್ಯಾಂಡ್ ಬೌಲರ್ ಅಜಾಝ್ ಪಟೇಲ್ ಹತ್ತು ವಿಕೆಟ್ ಪಡೆದು ದಾಖಲೆ ಮಾಡಿದರೆ, ನಂತರ ಭಾರತೀಯ ಬೌಲರ್ ಗಳ ದಾಳಿಗೆ ಬೆದರಿದ ಕಿವೀಸ್ ಕೇವಲ 62 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಮೊಹಮ್ಮದ್ ಸಿರಾಜ್ ತಂಡದ ಮೊತ್ತ 17 ರನ್ ಆಗುವಷ್ಟರಲ್ಲಿ ಮೂರು ವಿಕೆಟ್ ಕಿತ್ತಿದ್ದರು. ಮಾತ್ರವಲ್ಲದೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 4, ಅಕ್ಷರ್ ಪಟೇಲ್ 2, ಜಯಂತ್ ಯಾದವ್ 1 ವಿಕೆಟ್ ಪಡೆಯುವ ಮೂಲಕ ನ್ಯೂಝಿಲ್ಯಾಂಡ್ ತಂಡವನ್ನು 62 ರನ್ ಗಳಿಗೆ ಆಲೌಟ್ ಆಗಿದ್ದು ಭಾರತ ತಂಡ 263 ರನ್ ಗಳ ಬೃಹತ್ ಮುನ್ನಡೆ ಹೊಂದಿದೆ.
17 ರನ್ ಗಳಿಸಿದ ಕೈಲ್ ಜೇಮಿಸನ್ ರದ್ದೇ ಕಿವೀಸ್ ಪರ ಅಗ್ರ ಸ್ಕೋರರ್ ಎನಿಸಿಕೊಂಡರು. ಟಾಮ್ ಲ್ಯಾಥಂ 10 ರನ್ ಗಳಿಸಿದರೆ, ಉಳಿದ ಆಟಗಾರರು ಎರಡಂಕೆಯ ರನ್ ಗಳಿಸಲು ಅಶಕ್ತರಾದರು.
ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 325 ರನ್ ಗಳಿಸಿದೆ. ಮಯಾಂಕ್ ಅಗರ್ವಾಲ್ 150 ಮತ್ತು ಅಕ್ಷರ್ ಪಟೇಲ್ 52 ರನ್ ಗಳಿಸಿ ಮಿಂಚಿದರು.





