ಮಂಗಳೂರು: ದನಗಳನ್ನು ಕದ್ದೊಯ್ದ ಪ್ರಕರಣ:
ನಾಲ್ವರು ಆರೋಪಿಗಳ ಬಂಧನ
ಮಂಗಳೂರು: ಶುಕ್ರವಾರ ಮುಂಜಾನೆ ಬಂಗ್ರಕೂಳೂರಿನಲ್ಲಿ ನಸುಕಿನ 4 ಗಂಟೆಯ ವೇಳೆ ಗೋಲ್ಡ್ ಫಿಂಚ್ ಮುಂಭಾಗದಲ್ಲಿ ಮಾರಕಾಯುಧಗಳನ್ನು ಝಳಪಿಸಿ 3 ದನಗಳನ್ನು ಕದ್ದೊಯ್ದಿದ್ದ ಮೂವರು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೃತ್ಯಕ್ಕೆ ಬಳಸಿದ ಕಪ್ಪು ಬಣ್ಣದ ಸ್ಕೋರ್ಪಿಯೋ ವಾಹನ ಸಹಿತ ಆರೋಪಿಗಳಾದ ಮೊಹಮದ್ ಸಲೀಂ (32), ಮೊಹಮದ್ ತಂಜಿಲ್ (25) ಮೊಹಮದ್ ಇಕ್ಬಾಲ್ (23) ಹಾಗೂ ಆಫ್ರಿದಿ ಎನ್ನುವವರನ್ನು ಬಂಧಿಸಿದ್ದಾರೆ.
ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಡಿಸಿಪಿ ಗಳಾದ ಹರಿರಾಮ್ ಶಂಕರ್, ದಿನೇಶ್ ಕುಮಾರ್ ಮಾರ್ಗದರ್ಶನ, ಎಸಿಪಿ ಮಹೇಶ್ ಕುಮಾರ್ ಸಲಹೆಯಲ್ಲಿ ಮೂಡಬಿದಿರೆ ಮತ್ತು ಬಜ್ಪೆ ಠಾಣಾ ಸಿಬ್ಬಂದಿಗಳ ಸಹಕಾರದೊಂದಿಗೆ ನಡೆಸಲಾಗಿದೆ.





