ಭಾರತ ತಂಡದ ಹತ್ತೂ ವಿಕೆಟ್ ಗಳನ್ನು ಕಿತ್ತು ಹೊಸ ದಾಖಲೆ ಬರೆದ ಅಜಾಝ್ ಪಟೇಲ್
ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 325 ರನ್ ಗೆ ಆಲ್ ಔಟಾಗಿದೆ. ಭಾರತ ತಂಡದ ಎಲ್ಲಾ ಹತ್ತೂ ವಿಕೆಟ್ ಗಳನ್ನು ಕಿವೀಸ್ ಸ್ಪಿನ್ನರ್ ಅಜಾಝ್ ಪಟೇಲ್ ಒಬ್ಬರೇ ಕಿತ್ತು ಹೊಸ ದಾಖಲೆ ಬರೆದರು.
ಬರೋಬ್ಬರಿ 47.5 ಓವರ್ ಎಸೆದ ಅಜಾಜ್ ಪಟೇಲ್ 119 ರನ್ ನೀಡಿ ಎಲ್ಲಾ ಹತ್ತೂ ವಿಕೆಟ್ ಕಿತ್ತರು. ಜಿಮ್ ಲೇಕರ್, ಅನಿಲ್ ಕುಂಬ್ಳೆ ಬಳಿಕ ಅಜಾಜ್ ಪಟೇಲ್ ನೂತನ ಮೈಲಿಗಲ್ಲು ಸ್ಥಾಪಿಸಿದರು. ಇಂಗ್ಲೆಂಡ್ ನ ಲೇಕರ್ ಆಸೀಸ್ ವಿರುದ್ಧ, ಅನಿಲ್ ಕುಂಬ್ಳೆ ಪಾಕಿಸ್ಥಾನ ವಿರುದ್ಧ ಈ ದಾಖಲೆ ಬರೆದಿದ್ದರು.





