February 3, 2026

ಸುಳ್ಯ: ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಹಾಸಭೆ ಮುಂದೂಡಿಕೆಗೆ ಖಂಡನೆ

0
IMG-20211204-WA0054.jpg

ಸುಳ್ಯ: ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಭೆಯು ನವಂಬರ್ 25 ರಂದು ನಡೆದು ಆ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆದು ಡಿಸೆಂಬರ್ 5ರಂದು ಮಹಿಳಾ ಒಕ್ಕೂಟದ ಮಹಾಸಭೆಯನ್ನು ನಡೆಸುವುದಾಗಿ ದಿನಾಂಕವನ್ನು ಘೋಷಿಸಲಾಗಿತ್ತು ಹಾಗೂ ಸಂಘದ ಸದಸ್ಯರುಗಳನ್ನು ಆಹ್ವಾನಿಸಲಾಗಿತ್ತು.

ಆದರೆ ಪ್ರಸ್ತುತ ಒಕ್ಕೂಟದ ಅಧ್ಯಕ್ಷರು ಹಾಗೂ ಕೆಲವು ಪದಾಧಿಕಾರಿಗಳು ಸೇರಿಕೊಂಡು ಮಹಾಸಭೆಯ ದಿನಾಂಕವನ್ನು ಮುಂದೂಡಿದ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಈ ಮಹಾಸಭೆಯಲ್ಲಿ ಯಾವುದೇ ಮತದಾನ ಪ್ರಕ್ರಿಯೆಗಳು ಇರುವುದಿಲ್ಲ ಮತ್ತು ಯಾರಿಗೂ ಲಾಭ ತರುವ ಉದ್ದೇಶ ಇರುವುದಿಲ್ಲ. ಆದರೂ ಚುನಾವಣಾ ನೀತಿಸಂಹಿತೆ ನೆಪ ಹೇಳಿ ಮಹಾಸಭೆಯನ್ನು ಮುಂದೂಡಿರುವುದನ್ನು ಒಕ್ಕೂಟದ ಮಾಜಿ ಅಧ್ಯಕ್ಷರುಗಳು ಮತ್ತು ಸದಸ್ಯರುಗಳು ಖಂಡಿಸುತ್ತೇವೆ.
ಮಹಿಳೆಯರೇ ನಡೆಸುವ ಸಂಸ್ಥೆಗಳು ಯಾವಾಗಲೂ ಪಾರದರ್ಶಕ ಮತ್ತು ಭ್ರಷ್ಟಾಚಾರರಹಿತ ವೆಂದು ಜನಜನಿತವಾದ ಈ ದಿನಗಳಲ್ಲಿ ಮಹಿಳಾ ಒಕ್ಕೂಟದ ಈಗಿನ ಅಧ್ಯಕ್ಷರು ಮತ್ತು ಗೌರವ ಸಲಹೆಗಾರರು ನಡೆದುಕೊಳ್ಳುವ ರೀತಿ ಪ್ರಜಾಪ್ರಭುತ್ವ ಮಾದರಿಯ ನಡೆಯಲ್ಲ ಎಂದು ಮಾಜಿ ಅಧ್ಯಕ್ಷರುಗಳು ಪತ್ರಿಕಾ ಪ್ರಕಟಣೆ ಮೂಲಕ ಖಂಡನೆಯನ್ನು ತಿಳಿಸಿರುತ್ತಾರೆ.

ಈ ಎಲ್ಲ ಘಟನೆಗಳಿಂದ ಸುಳ್ಯ ತಾಲ್ಲೂಕು ಮಹಿಳಾ ಮಂಡಲಗಳ ಒಕ್ಕೂಟದ ಪರ-ವಿರೋಧ ಕೇಳಿಬರುತ್ತಿರುವ ಚರ್ಚೆಗಳು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!