December 19, 2025

ಬ್ರಹ್ಮಾವರ: ಮನೆಯಿಂದ ಮಹಿಳೆ ನಾಪತ್ತೆ

0
image_editor_output_image-285414332-1705386345141.jpg

ಬ್ರಹ್ಮಾವರ: ಹನೆಹಳ್ಳಿ ಮಾಸ್ತಿ ನಗರದ ಬಚ್ಚಿ ಪೂಜಾರ್ತಿ (69) ಕಾಣೆಯಾಗಿದ್ದಾರೆ.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ಮನೆಯಿಂದ ಹೇಳದೆ ಕೇಳದೆ ಹೋಗುವುದು ಮಾಡುತ್ತಿದ್ದು, ಕೆಲವೊಮ್ಮೆ 2-3 ದಿನ ಬಿಟ್ಟು ಮನೆಗೆ ಬರುತ್ತಿದ್ದರು.

ಪುತ್ರನೊಂದಿಗೆ ವಾಸವಿದ್ದ ಅವರು 2019ರ ನವೆಂಬರ್‌ನಿಂದ ಕಾಣೆಯಾಗಿದ್ದು, ಮುಂಬಯಿಯಲ್ಲಿ ನೆಲೆಸಿರುವ ಪುತ್ರಿಗೆ ವಿಚಾರ ತಿಳಿದು ಆಗಮಿಸಿ ಸುತ್ತಲಿನ ಪರಿಸರ, ನೆಂಟರಿಷ್ಟರು, ವೃದ್ಧಾಶ್ರಮ, ಅನಾಥಾಶ್ರಮಗಳಲ್ಲಿ ಹುಡುಕಾಡಿದರೂ ಯಾವುದೇ ಮಾಹಿತಿ ದೊರೆತಿಲ್ಲ. ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!