ಕುಂದಾಪುರ: ಮಕರ ಸಂಕ್ರಾಂತಿಯಂದು ಶಬರಿ ಮಲೆಯಲ್ಲಿ ಮಕರ ಜ್ಯೋತಿಯನ್ನು ವೀಕ್ಷಿಸಲೆಂದು ತೆರಳಿದ್ದ ಅಯ್ಯಪ್ಪ ವೃತಧಾರಿ ಶಬರಿಮಲೆಯಲ್ಲಿಯೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಶಬರಿಮಲೆಯಲ್ಲಿ ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಕುಂದಾಪುರ ತಾಲೂಕಿನ ಕೋಡಿ ನಿವಾಸಿ ನಾಗರಾಜ್ ಕೋಡಿ ಎಂದು ಗುರುತಿಸಲಾಗಿದೆ.
ನಾಗರಾಜ್ ಹಾಗೂ ತಂಡ ಜನವರಿ 15ರಂದು ಮಕರ ಜ್ಯೋತಿ ದರ್ಶನ ಪಡೆಯಲು ವೃತಧಾರಿಗಳಾಗಿ ತೆರಳಿದ್ದರು ಎನ್ನಲಾಗಿದೆ. ಆದರೆ ಶಬರಿ ಮಲೆಯಲ್ಲಿ ಇದ್ದಕ್ಕಿದ್ದಂತೆ ನಾಗರಾಜ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.





