December 19, 2025

ಮಲ್ಪೆ: ಮಾರಕಾಸ್ತ್ರ ಹಿಡಿದು ಗಲಾಟೆ: ಮೂವರು ಪೊಲೀಸ್‌ ವಶಕ್ಕೆ

0
IMG-20230726-WA00421.jpg

ಮಲ್ಪೆ: ಮಾರಕಾಯುಧವಾದ ಮಚ್ಚನ್ನು ಹಿಡಿದುಕೊಂಡು ಗಲಾಟೆ ಮಾಡುತ್ತದ್ದ ಮೂವರು ಆರೋಪಿಗಳನ್ನು ಪೊಲೀಸರು ಅಡ್ಡಬೇಂಗ್ರೆ ಬಳಿ ಓಯಾಸಿಸ್‌ ಗೆಸ್ಟ್‌ ಹೌಸ್‌ ಬಳಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಮೊಹಮ್ಮದ್‌ ಸಕ್ಲೇನ್‌ , ಅಬ್ದುಲ್‌ ರಾಕೀಬ್‌, ಸುಮಿತ್‌ ತೇಜಪಾಲ್‌ ಎಂದು ಗುರುತಿಸಲಾಗಿದೆ.

ಜ. 12 ರಂದು ಎಎಸ್‌ಐ ಸಂತೋಷ ಕುಮಾರ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಪಿಎಸ್‌ಐ ಕರೆ ಮಾಡಿ ಅಡ್ಡಬೇಂಗ್ರೆಯಲ್ಲಿ 3 ಜನ ವ್ಯಕ್ತಿಗಳು ಮಾರಕಾಯುಧವಾದ ಮಚ್ಚನ್ನು ಹಿಡಿದುಕೊಂಡು ಗಲಾಟೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಸಿಬ್ಬಂದಿಗಳೊಂದಿಗೆ ಓಯಾಸಿಸ್‌ ಗೆಸ್ಟ್‌ ಹೌಸ್‌ ಬಳಿ ಹೋಗಿ ನೋಡಿದಾಗ ಅಲ್ಲಿ 3 ಜನ ವ್ಯಕ್ತಿಗಳು ಹಾಗೂ ಸಾರ್ವಜನಿಕರು ಸೇರಿದ್ದರು. ಬಳಿಕ ಸಾರ್ವಜನಿಕರನ್ನು ದೂರ ಸರಿಸಿ 3 ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.

ಬಳಿಕ 3 ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಆರೋಪಿಗಳ ಬಳಿ ಇದ್ದ ನೋಂದಣಿ ಸಂಖ್ಯೆ ಇಲ್ಲದ ಕಪ್ಪು ಬಜಾಜ್‌ ಪಲ್ಸರ್‌ ಬಜಾಜ್‌ ಸೈಕಲ್‌ ನ ಅಂದಾಜು ಮೌಲ್ಯ 80000 ರೂ , ಸ್ಕೂಟರ್‌, ಹಾಗೂ ಒಂದು ತಲವಾರು ಸ್ವಾದೀನಪಡಿಸಿಕೊಳ್ಳಲಾಯಿತು. ಈ ಬಗ್ಗೆ ಮಲ್ಪೆ ಠಾಣಾ ಶಸ್ರ್ತಾ ನಿಷೇದ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!