December 19, 2025

ಜ.15: ವಿಟ್ಲದಲ್ಲಿ ಎಂ.ಜಿ.ಆರ್ ಕಾರ್ಪೋರೇಶನ್ ಮತ್ತು ಇಂದಿರಾ ಜನಸೇವಾ ಕೇಂದ್ರ ಉದ್ಘಾಟನೆ: ಸ್ಮಾರ್ಟ್ ಸಿಟಿಯಲ್ಲಿ ಗಣ್ಯಾತಿಗಣ್ಯರಿಂದ ಚಾಲನೆ

0
image_editor_output_image-1529173772-1705082441876

ವಿಟ್ಲ: ಎಂ.ಜಿ.ಆರ್ ಕಾರ್ಪೋರೇಶನ್ ಮತ್ತು ಇಂದಿರಾ ಜನಸೇವಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವು ಜ. 15 ರಂದು ಬೆಳಿಗ್ಗೆ 10ಕ್ಕೆ ವಿಟ್ಲ ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿಯಲ್ಲಿ ನಡೆಯಲಿದೆ.

ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ಫರೀದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್‍ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ಗುರುದೇವಾನಂದ ಸ್ವಾಮೀಜಿ, ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬರು ಮಹಮ್ಮದ್ ರಫೀಖ್ ಅಹ್ಸನಿ, ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯ ಸುನೀಲ್ ಪ್ರವೀಣ್ ಪಿಂಟೋ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೋಕ್ತೇಸರರಾದ ಬಂಗಾರು ಅರಸರು ವಿಟ್ಲ ಅರಮನೆ ಗೌರವ ಉಪಸ್ಥಿತಿ ವಹಿಸಲಿದ್ದಾರೆ.

ದ.ಕ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ , ರಾಮನಗರ ಶಾಸಕ ಇಕ್ಬಾಲ್ ಹುಸೈನ್, ಕರ್ನಾಟಕ ಸರ್ಕಾರ ಮಾಜಿ ಸಚಿವ ಬಿ. ರಮಾನಾಥ ರೈ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀ ಅಧ್ಯಕ್ಷ ಎಸ್.ಎಮ್ ರಶೀದ್ ಹಾಜಿ, ಬೆಂಗಳೂರು ಹಲಾಲ್ ಹೌಸಿಂಗ್‌ನ ಫೈನಾನ್ಸಿಯಲ್ ಆಡ್ವೈಸರ್ & ಮ್ಯಾನೇಜಿಂಗ್ ಡೈರೆಕ್ಟರ್ ಅಹಮದ್ ಹಸನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನಟ ಹಾಗೂ ವಿನ್ನರ್ ಬಿಗ್ ಬಾಸ್ ಸೀಸನ್ 8 ಮಂಜು ಪಾವಗಡ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಅಮೈ ಪದ್ಮಶ್ರೀ ಮಹಾಲಿಂಗ ನಾಯ್ಕ್, ವಿಟ್ಲ ಮುಡ್ನೂರು ಚಂದ್ರಶೇಖರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!