ಮಂಗಳೂರು: ಅಕ್ರಮ ಮರಳುಗಾರಿಕಾ ಸ್ಥಳಕ್ಕೆ ಪೊಲೀಸರ ದಾಳಿ
ಮಂಗಳೂರು: ಮಂಗಳೂರು ಹೊರವಲಯದ ಹಳೆಯಂಗಡಿ ಕೊಪ್ಪಕಾಡು ಪ್ರದೇಶದ ನಂದಿನಿ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಾರೆ ಎಂಬ ಖಚಿತ ಮಾಹಿತಿ ಆಧಾರಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಮುಲ್ಕಿ ಪೊಲೀಸರ ಸಹಾಯದೊಂದಿಗೆ ಈ ದಾಳಿ ನಡೆಸಿದ್ದಾರೆ.
ಈ ಸಂದರ್ಭ ಸ್ಥಳದಲ್ಲಿ ಮರಳು ತೆಗೆಯುತ್ತಿದ್ದ ನಾಲ್ಕು ದೋಣಿಗಳನ್ನು ಕ್ರೇನ್ ಬಳಸಿ ಮೇಲಕ್ಕೆ ತೆಗೆದು ಮುಟ್ಟುಗೋಲು ಹಾಕಿಕೊಂಡಿದ್ದು, ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಈ ಪ್ರದೇಶದಲ್ಲಿ ಹಲವೆಡೆ ಅವ್ಯಾಹತವಾಗಿ ಮರಳುಗಾರಿಕೆ ನಡೆಸುತ್ತಿದ್ದ ಬಗ್ಗೆ ಸಾರ್ವಜನಿಕರು ಗಣಿ ಇಲಾಖೆಗೆ ದೂರು ನೀಡಿದ್ದರು. ಹಲವಾರು ಸಮಯದಿಂದ ಸ್ಥಳಿಯ ಪಂಚಾಯತ್‌ಗೆ ಅಕ್ರಮ ಮರಳುಗಾರಿಗೆ ತಡೆಯುವಂತೆ ಪಂಚಾಯತ್‌ಗೆ ಮನವಿ ಸಲ್ಲಿಸಿದರೂ ಮರಳುಗಾರಿಕೆ ನಿಂತಿರಲಿಲ್ಲ.
ಮರುಳನ್ನ ದೋಣಿಗೆ ತುಂಬಿಸುತ್ತಿದ್ದ ಸಮಯದಲ್ಲೇ ಗಣಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಬಳಿಕ ದೋಣಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.





