April 8, 2025

ನೇಪಾಳದ ಖ್ಯಾತ ಕ್ರಿಕೆಟಿಗ ಸಂದೀಪ್ ಲಮಿಚಾನೆಗೆ 8 ವರ್ಷಗಳ ಜೈಲು ಶಿಕ್ಷೆ

0

ಕಾಠ್ಮಂಡು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ನ್ಯಾಯಾಲಯವು ಖ್ಯಾತ ಕ್ರಿಕೆಟಿಗ, ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆ ಅವರಿಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ನ್ಯಾಯಾಧೀಶ ಶಿಶಿರ್ ರಾಜ್ ಧಾಕಲ್ ಅವರು ನೀಡಿದ ತೀರ್ಪಿನಲ್ಲಿ ಜೈಲು ಶಿಕ್ಷೆ ಮತ್ತು ಆರ್ಥಿಕ ದಂಡ ಎರಡನ್ನೂ ಒಳಗೊಂಡಿತ್ತು ಎಂದು ನ್ಯಾಯಾಲಯದ ಅಧಿಕಾರಿ ರಾಮು ಶರ್ಮಾ ಅವರು ವಿಚಾರಣೆಯ ನಂತರ ದೃಢಪಡಿಸಿದರು.

ಈ ಹಿಂದೆ ಕಾಠ್ಮಂಡು ಜಿಲ್ಲಾ ನ್ಯಾಯಾಲಯದಿಂದ ಅತ್ಯಾಚಾರ ಪ್ರಕರಣದಲ್ಲಿ ದೋಷಾರೋಪಣೆಗೊಳಗಾದ ಸಂದೀಪ್ ಲಮಿಚಾನೆ ಅವರು ದೋಷಿಯೆಂದು ಡಿಸೆಂಬರ್‌ ನಲ್ಲಿ ತೀರ್ಪು ನೀಡಲಾಗಿತ್ತು. ಫೆಬ್ರವರಿ 23 ರಂದು ಸುಪ್ರೀಂ ಕೋರ್ಟ್ ತ್ವರಿತ ಪ್ರಕ್ರಿಯೆಗೆ ಸೂಚನೆ ನೀಡಿತ್ತು. ಆದರೆ ವಿವಿಧ ಕಾರಣಗಳಿಂದ ವಿಚಾರಣೆ ವಿಳಂಬವಾಯಿತು.
ಆರೋಪಿ ಮತ್ತು ಮಾಜಿ ರಾಷ್ಟ್ರೀಯ ತಂಡದ ನಾಯಕ ಲಮಿಚಾನೆ ಅವರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಬಂಧನದಲ್ಲಿ ಕೆಲವು ತಿಂಗಳುಗಳನ್ನು ಕಳೆದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು ಮತ್ತು ವಿದೇಶ ಪ್ರಯಾಣಕ್ಕೆ ಅನುಮತಿ ನೀಡಲಾಯಿತು.

 

 

Leave a Reply

Your email address will not be published. Required fields are marked *

error: Content is protected !!