ಶಿಕ್ಷಕನಿಗೆ ಪಲ್ಸರ್ ಬೈಕ್ ಉಡುಗೊರೆಯಾಗಿ ನೀಡಿದ ಗ್ರಾಮಸ್ಥರು
ಸಾಗರ: 16 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ಪಲ್ಸರ್ ಬೈಕ್ ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.ಶಿಕ್ಷಕ ಮತ್ತು ಅವರ ಪತ್ನಿ ಬೈಕ್ ಹತ್ತಿ ಶಾಲೆ ಬಳಿ ರೌಂಡ್ ಹಾಕುವುದನ್ನು ಕಂಡು ಗ್ರಾಮಸ್ಥರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.
ಶಿಕ್ಷಕ ಮತ್ತು ಅವರ ಪತ್ನಿ ಬೈಕ್ ಹತ್ತಿ ಶಾಲೆ ಬಳಿ ರೌಂಡ್ ಹಾಕುವುದನ್ನು ಕಂಡು ಗ್ರಾಮಸ್ಥರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.
ಸಾಗರ ತಾಲೂಕಿನ ಕುಗ್ರಾಮ ವಳೂರಿನ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದ ಸಂತೋಷ್ ಕಾಂಚನ್ ಅವರು ಕುಂದಾಪುರದ ವಾರಾಹಿ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಶಾಲೆ ಆವರಣದಲ್ಲಿ ಅವರಿಗಾಗಿ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು





