ಮಧುರೈ: ಡಿಸೆಂಬರ್ 12 ರಿಂದ ಲಸಿಕೆ ಹಾಕದ ವ್ಯಕ್ತಿಗಳಿಗೆ 18 ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿಷೇಧ
ತಮಿಳುನಾಡು: ಮಧುರೈ ಜಿಲ್ಲೆಯಲ್ಲಿ ಲಸಿಕೆ ಹಾಕದ ನಿವಾಸಿಗಳು ಡಿಸೆಂಬರ್ 12 ರಿಂದ 18 ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಎಸ್ ಅನೀಶ್ ಶೇಖರ್ ಶುಕ್ರವಾರ ತಿಳಿಸಿದ್ದಾರೆ.
ಲಸಿಕೆ ಹಾಕಿಸಿಕೊಳ್ಳದ ಜನರು ಡಿಸೆಂಬರ್ 12 ರಿಂದ ಮಾರುಕಟ್ಟೆ, ಹೋಟೆಲ್, ಶಾಪಿಂಗ್ ಮಾಲ್, ಚಿತ್ರ ಮಂದಿರ, ಹೋಟೆಲ್, ಮದುವೆ ಮಂಟಪ, ಟ್ಯಾಸ್ಮ್ಯಾಕ್ ಮತ್ತು ಪಿಡಿಎಸ್ ಅಂಗಡಿಗಳಿಗೆ ಹೋಗುವಂತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ದೇಶದಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳನ್ನು ಗುರುತಿಸಿರುವ ಮತ್ತು ತಮಿಳುನಾಡಿನ ಎರಡು ಮಾದರಿಗಳನ್ನು ಜೀನೋಮ್ ಪರೀಕ್ಷೆಗೆ ಕಳುಹಿಸಿರುವ ಸಮಯದಲ್ಲಿ ಈ ನಿರ್ಧಾರ ಬಂದಿದೆ.
ನವೆಂಬರ್ 18 ರಂದು, ತಮಿಳುನಾಡು ಸಾರ್ವಜನಿಕ ಆರೋಗ್ಯ ಕಾಯಿದೆ, 1939 ರ ಅಡಿಯಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಪ್ರಿವೆಂಟಿವ್ ಮೆಡಿಸಿನ್ ನಿರ್ದೇಶನಾಲಯವು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು ಕೋವಿಡ್ -19 ಲಸಿಕೆಯನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿತ್ತು. ಶುಕ್ರವಾರ, ಜಿಲ್ಲಾಧಿಕಾರಿ ಡಾ ಅನೀಶ್ ಶೇಖರ್ ಮಾತನಾಡಿ, ಜಿಲ್ಲೆಯ ಜನರಿಗೆ ಕನಿಷ್ಠ ಒಂದು ಡೋಸ್ ಮಾಡಲು ಒಂದು ವಾರದ ಬಫರ್ ಸಮಯವನ್ನು ನೀಡಲಾಗುತ್ತಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅನೀಶ್ ಶೇಖರ್, ಜಿಲ್ಲೆಯಲ್ಲಿ ಲಸಿಕೆ ನೀಡುವಲ್ಲಿ ಕಳಪೆ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಮೊದಲ ಡೋಸ್ ಶೇ.71 ಹಾಗೂ ಎರಡನೇ ಡೋಸ್ ಶೇ.32ರಷ್ಟು ಮಂದಿ ಮಾತ್ರ ಪಡೆದಿದ್ದಾರೆ ಎಂದರು. ಸುಮಾರು 3 ಲಕ್ಷ ಜನರು ಇನ್ನೂ ಒಂದು ಡೋಸ್ ಅನ್ನು ಪಡೆಯಬೇಕಾಗಿದೆ ಎಂದು ಅವರು ಹೇಳಿದರು
ಜಿಲ್ಲಾಡಳಿತ ಸೂಚಿಸಿರುವ 18 ಸ್ಥಳಗಳಲ್ಲಿ ಲಸಿಕೆ ಹಾಕಿದವರಿಗೆ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಲು ಪಾಲಿಕೆ ಮತ್ತು ಆರೋಗ್ಯಾಧಿಕಾರಿಗಳಿಂದ ಹಠಾತ್ ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.





