ವಿಟ್ಲ ಡಿ’ ಗ್ರೂಪ್:
ಉಚಿತ ವೈದ್ಯಕೀಯ ಹಾಗೂ ರಕ್ತದಾನ ಶಿಬಿರದ ಆಹ್ವಾನ ಪತ್ರಿಕೆ ಬಿಡುಗಡೆ
ವಿಟ್ಲ: ಡಿ’ ಗ್ರೂಪ್ ವಿಟ್ಲ (ರಿ) ಇದರ ವತಿಯಿಂದ ಜನವರಿ 14 ರಂದು ವಿಟ್ಲದ ಪುತ್ತೂರು ರಸ್ತೆಯ ಬ್ರೈಟ್ ಆಡಿಟೋರಿಯಂ ನಲ್ಲಿ ನಡೆಯುವ ಉಚಿತ ವೈದ್ಯಕೀಯ ಹಾಗೂ ರಕ್ತದಾನ ಶಿಬಿರದ ಆಹ್ವಾನ ಪತ್ರಿಕೆಯನ್ನು ಸಂಘಟನೆಯ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಖಲಂದರ್ ಪರ್ತಿಪ್ಪಾಡಿ, ಶಾಕಿರ್ ಅಳಕೆಮಜಲು, ಅಬೂಬಕರ್ ಅನಿಲಕಟ್ಟೆ, ಬಶೀರ್ ಬೊಬ್ಬೆಕ್ಕೇರಿ, ಶೀತಲ್ ಇಕ್ಬಾಲ್, ವಿ.ಕೆ.ಎಂ.ಹಂಝ, ಇರ್ಶಾದ್ ಸೆಲೆಕ್ಟ್, ರಾಝಿಕ್ ಮೇಗಿನಪೇಟೆ, ರಾಝಿಕ್ ಕಿಸ್ವ, ಮನ್ಸೂರ್ ಮಂಗಿಲಪದವು ಉಪಸ್ಥಿತರಿದ್ದರು.




