February 4, 2026

ಬಂಟ್ವಾಳ: ಮೊಡಂಕಾಪು ರೈಲ್ವೆ ಮೇಲ್ಸೇತುವೆಯ ಅಡಿ ಭಾಗ ಸಿಲುಕಿಕೊಂಡ ಬೃಹತ್ ಗಾತ್ರದ ಲಾರಿ

0
image_editor_output_image-192515443-1704551360813.webp

ಬಂಟ್ವಾಳ: ಬಿಸಿರೋಡು- ಪೊಳಲಿ ರಸ್ತೆ ಮಧ್ಯೆ ಮೊಡಂಕಾಪು ರೈಲ್ವೆ ಮೇಲ್ಸೇತುವೆಯ ಅಡಿ ಭಾಗದಲ್ಲಿ ಬೃಹತ್ ಗಾತ್ರದ ಲಾರಿಯೊಂದು ಸಿಲುಕಿಕೊಂಡ ಘಟನೆ ಶನಿವಾರ ಸಂಜೆ ವೇಳೆ ನಡೆದಿದೆ.

ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಕೆಮಿಕಲ್ ತುಂಬಿದ ಬ್ಯಾರಲ್ ಗಳನ್ನು ಸಾಗಾಟ ಮಾಡುತ್ತಿದ್ದ ಸಮಯದಲ್ಲಿ ರೈಲ್ವೆ ಓವರ್ ಬ್ರಿಡ್ಜ್ ನಲ್ಲಿ ಮುಂದೆ ಸಾಗಲು ಸಾಧ್ಯವಾಗದೆ ಬಾಕಿಯಾಗಿದೆ.

ಘನ ಗಾತ್ರದ ವಾಹನಗಳು ಸಾಗಾಟ ಮಾಡಬಾರದು ಎಂಬ ದೃಷ್ಟಿಯಿಂದ ರೈಲು ಮಾರ್ಗದ ಅಡಿಭಾಗದಲ್ಲಿ ಕಬ್ಬಿಣದ ರಾಡ್ ವೊಂದನ್ನು ಆಳವಡಿಸಿ ಸೂಚನೆ ನೀಡಲಾಗಿದೆ.
ಆದರೆ ಲಾರಿ ಚಾಲಕ ಈ ಬಗ್ಗೆ ಅರಿವಿಲ್ಲದೆ ಒಳರಸ್ತೆಯಲ್ಲಿ ಬಂದು ಸಿಲುಕಿಕೊಂಡಿದ್ದ.
ಗೂಗಲ್ ಮ್ಯಾಪ್ ಮೂಲಕ ಮಂಗಳೂರು ಕಡೆಗೆ ಹೊರಟಿದ್ದ ಈತ ಪೊಳಲಿ ರಸ್ತೆ ಮೂಲಕ ಸಂಚಾರಕ್ಕೆ ಮುಂದಾಗಿದ್ದ. ಆದರೆ ಕೈಕಂಬ ಕಳೆದು ಮೊಡಂಕಾಪು ತಲುಪಿದಾಗ ರೈಲು ಮಾರ್ಗದ ಅಡಿಭಾಗದಲ್ಲಿ ಲಾರಿ ಮುಂದೆ ಸಾಗಲು ಸಾಧ್ಯವಾಗದೆ ಸಿಲುಕಿಕೊಂಡಿದೆ.

ಘಟನೆಯಿಂದ ಸಂಚಾರಕ್ಕೆ ಸ್ವಲ್ಪ ಸಮಯ ತೊಂದರೆ ಉಂಟಾಯಿತು.
ಸ್ಥಳಕ್ಕೆ ಬೇಟಿ ನೀಡಿದ ಟ್ರಾಫಿಕ್ ಎ.ಎಸ್. ಐ.ಸುರೇಶ್ ಪಡಾರ್ ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಕ್ರೇನ್ ತರಿಸಿ ಲಾರಿಯನ್ನು ಬದಿಗೆ ತರಿಸಿದರು.

Leave a Reply

Your email address will not be published. Required fields are marked *

error: Content is protected !!