ವಿಟ್ಲ: ಎಸ್ಕೆಎಸ್ಎಸ್ಎಫ್ ಉಕ್ಕುಡ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ:
ಅಧ್ಯಕ್ಷರಾಗಿ ಡಿ.ಎಂ ಅಬ್ದುರ್ರಹ್ಮಾನ್, ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಶಫೀಕ್ ಆಯ್ಕೆ
ವಿಟ್ಲ: ಉಕ್ಕುಡ ಎಸ್ಕೆಎಸ್ಎಸ್ಎಫ್ ಉಕ್ಕುಡ ಶಾಖೆ ಇದರ 2024-26 ನೇ ಸಾಲಿನ ನೂತನ ಸಮಿತಿ ರಚನೆ ಡಿ.ಎಂ ಅಬ್ದುರ್ರಹ್ಮಾನ್ ದರ್ಬೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಸಮಿತಿ ರಚನಾ ಸಭೆಯಲ್ಲಿ ಉಕ್ಕುಡ ಶಾಖಾ ಸೆಕ್ರಟರಿ ಉಸ್ತಾದ್ ಶಫೀಕ್ ಅಝ್ಹರಿ ಸ್ವಾಗತಿಸಿದರು. ಚುನಾವಣಾಧಿಕಾರಿಯಾಗಿ ವಿಟ್ಲ ವಲಯ ವರ್ಕಿಂಗ್ ಕಾರ್ಯದರ್ಶಿ ಆಗಿ ಉಸ್ತಾದ್ ಇಸ್ಮಾಯೀಲ್ ಹನೀಫಿ ಭಾಗವಹಿಸಿದ್ದರು.
2024-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಿ.ಎಂ. ಅಬ್ದುರ್ರಹ್ಮಾನ್ ದರ್ಬೆ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶಫೀಕ್ ಅಲ್ ಅಝ್ಹರಿ, ಕೋಶಾಧಿಕಾರಿಯಾಗಿ ಮುನೀರ್ ದರ್ಬೆ ವರ್ಕಿಂಗ್ ಕಾರ್ಯದರ್ಶಿಯಾಗಿ ಎಸ್ ಎಂ . ಜುನೈದ್ ಅನ್ಸಾರಿ ಉಕ್ಕುಡ, ಉಪಾಧ್ಯಕ್ಷರಾಗಿ ಅಝೀಝ್ ಉಕ್ಕುಡ , ಅಬ್ದುರ್ರಹ್ಮಾನ್ ಅದ್ದುಚ್ಚ, ಜತೆ ಕಾರ್ಯದರ್ಶಿಗಳಾಗಿ ಅಬ್ಬಾಸ್ ಟಿ ಎಚ್ ಎಂ ಎ, ಕ್ಲಸ್ಟರ್ ಕೌನ್ಸಿಲರ್ ಗಳಾಗಿ ಖಾಸಿಂ ದಾರಿಮಿ ಉಸ್ತಾದ್ ಅಶ್ರಫ್, ಅಬ್ಬಾಸ್ ಟಿ ಎಚ್ ಎಂ ಎ, ಅಝೀಝ್ ಉಕ್ಕುಡ, ಅಬ್ದುರ್ರಹ್ಮಾನ್ ಶಾನ್ ಹಾಗೂ ಏಳು ಮಂದಿಯನ್ನು ಸಮಿತಿ ಸದಸ್ಯರಾಗಿ, ಟ್ರೆಂಡ್ ಎಜ್ಯುಕೇಟರಾಗಿ ರಶೀದ್ ಡಿ ಎಂ ಆರಿಸಲಾಯಿತು.





