ನಾಳೆ: ತಾಜುಲ್ ಉಲಮಾ ಸುನ್ನೀ ಸೆಂಟರ್ ಎನ್ . ಸಿ ರೋಡ್ ನಲ್ಲಿ 10ನೇ ವಾರ್ಷಿಕ ಮತ್ತು ಅನುಸ್ಮರಣಾ ಸಮ್ಮೇಳನ
ವಿಟ್ಲ: ವರ್ಷಂಪ್ರತಿ ತಾಜುಲ್ ಉಲಮಾ ಸುನ್ನೀ ಸೆಂಟರ್ ಎನ್,ಸಿ ರೋಡ್ ವತಿಯಿಂದ ಆಚರಿಸಿಕೊಂಡು ಬರುತ್ತಿರುವ
ನೇತಾರರ ಅನುಸ್ಮರಣಾ ಸಮ್ಮೇಳನ ಮತ್ತು ತಾಜುಲ್ ಉಲಮಾ ಸುನ್ನೀ ಸೆಂಟರ್ ಇದರ 10ನೇ ವಾರ್ಷಿಕ ಸಮ್ಮೇಳನ ಬೋಳಂತೂರು ಗ್ರಾಮದ ಎನ್,ಸಿ ರೋಡಲ್ಲಿ ನಾಳೆ ಜ. 4ರ ಗುರುವಾರ ಎನ್ ಮಂಚಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸಂಜೆ ಮಗ್ರಿಬ್ ನಮಾಝ್ ಬಳಿಕ ಅಸ್ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ರವರ ನೇತೃತ್ವದಲ್ಲಿ, ನೂರುಲ್ ಹುದಾ ದರ್ಸ್ ವಿಧ್ಯಾರ್ಥಿಗಳು ಒಕ್ಕೆತ್ತೂರು ಇವರ ಆಲಾಪಣೆಯೊಂದಿಗೆ ತಾಜುಲ್ ಉಲಮಾ ಮೌಲಿದ್ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 8:30 ಗಂಟೆಗೆ ಅಸ್ಸಯ್ಯಿದ್ ನೂರುಸ್ಸಾದತ್ ಬಾಯರ್ ತಂಙಳ್ ರವರ ದುಹಾ ಆಶೀರ್ವಚನದೊಂದಿಗೆ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಅನುಸ್ಮರಣಾ ಕಾರ್ಯಕ್ರಮವನ್ನು ಉಧ್ಘಾಟಿಸಲಿದ್ದು,ದಾರುಲ್ ಅಶ್-ಅರಿಯ್ಯ ಸಂಸ್ಥೆಯ ಮ್ಯಾನೆಜರ್ ಮಹಮ್ಮದ್ ಅಲಿ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಪೇರೋಡು ಮುಹಮ್ಮದ್ ಅಝ್ಹರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಅಲ್ಲದೆ ಕಾರ್ಯಕ್ರಮದಲ್ಲಿ ಇನ್ನಿತರ ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.






