ವಿಟ್ಲ: ರಸ್ತೆ ಬದಿಯಲ್ಲಿದ್ದ ಪುರಾತನ ಕಾಲದ ಮರ ಕಡಿದ ಪ್ರಕರಣ:
ಆರೋಪಿ ವಿರುದ್ಧ ಪ್ರಕರಣ ದಾಖಲು
ವಿಟ್ಲ: ಮಂಗಳಪದವು ಸಾರ್ವಜನಿಕ ಸ್ಥಳದಲ್ಲಿದ್ದ ಪುರಾತನ ದೇವದಾರು ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಮಂಗಿಲಪದವು ಎಂಬಲ್ಲಿ ಅಕ್ರಮವಾಗಿ ಒಂದು ದೇವದಾರು ಜಾತಿಯ ಮರದ ತುದಿಗೆಲ್ಲುಗಳನ್ನು ಕಡಿದು ಕಟ್ಟಿಗೆಗಳನ್ನಾಗಿ ಪರಿವರ್ತಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ವಲಯ ಅರಣ್ಯ ಕಛೇರಿಯಲ್ಲಿ ಅರಣ್ಯ ತಕ್ಷೀರು ದಾಖಲಾಗಿದೆ.
ಗೆಲ್ಲುಗಳನ್ನು ಕಡಿದ ಆರೋಪಿ ಎ.ಎಫ್ ಮಸ್ಕರೇನಸ್ ಮಂಗಿಲಪದವು ರವರ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ಕರ್ನಾಟಕ ಅರಣ್ಯ ನಿಯಮಾವಳಿ ಪ್ರಕಾರ ಪ್ರಕರಣ ದಾಖಲಾಗಿದ್ದು, 1.500 ಘನ ಮೀಟರ್ ಕಟ್ಟಿಗೆಯ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.





