ಬೋರ್ ವೆಲ್ ಗೆ ಬಿದ್ದು 3 ವರ್ಷದ ಮಗು ಮೃತ್ಯು

ಗಾಂದಿನಗರ: ಮನೆಯ ಅಂಗಳದಲ್ಲಿ ಅಡುತ್ತಿದ್ದ 3 ವರ್ಷದ ಪುಟ್ಟ ಕಂದಮ್ಮ ಬೋರ್ ವೆಲ್ ಗೆ ಬಿದ್ದು ಮೃತಪಟ್ಟ ಘಟನೆ ಗುಜರಾತ್ ನ ದ್ವಾರಕ ಜಿಲ್ಲೆಯ ರನ್ ಗ್ರಾಮದಲ್ಲಿ ನಡೆದಿದೆ.
ಸಖ್ರಾ (3) ಮಧ್ಯಾಹ್ನ ವೇಳೆ ಅಂಗಳದಲ್ಲಿ ಆಡುತ್ತಿರುವಾಗ ಮನೆಯ ಅಂಗಳದಲ್ಲಿದ್ದ ತೆರೆದ ಬಾವಿಗೆ ಆಯತಪ್ಪಿ ಬಿದ್ದಿದ್ದಾಳೆ. ಇದನ್ನು ಕಂಡ ಪೋಷಕರು ಆಕ್ರಂದನ ಮುಗಿಲೇರಿದೆ. ಕೂಡಲೆ ಸ್ಥಳಕ್ಕೆ ರಕ್ಷಣೆ ಕಾರ್ಯ ಸಿಬ್ಬಂದಿಗಳು, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣ ಕಾರ್ಯಕ್ಕೆ ಮುಂದಾಗಿದ್ದಾರೆ.