March 28, 2026

ಜನವರಿ 14: ಡಿ ಗ್ರೂಪ್ ವಿಟ್ಲ 15ನೇ ವರ್ಷದ ಪಾದಾರ್ಪಣೆ ಸಂಭ್ರಮ:   
ಜನಪ್ರಿಯ ಆಸ್ಪತ್ರೆ ಮಂಗಳೂರು ಮತ್ತು ಹಾಸನ ನೇತೃತ್ವದಲ್ಲಿ ಬೃಹತ್ ಆರೋಗ್ಯ ಶಿಬಿರ

0
image_editor_output_image-1165793390-1704212590569

ವಿಟ್ಲ: ಡಿ ಗ್ರೂಪ್ ವಿಟ್ಲ ಇದರ 15ನೇ ವರ್ಷದ ಪಾದಾರ್ಪಣೆ ಸಂಭ್ರಮದ ಪ್ರಯುಕ್ತ ಜನಪ್ರಿಯ ಆಸ್ಪತ್ರೆ ಮಂಗಳೂರು ಮತ್ತು ಹಾಸನ ಆರೋಗ್ಯ ಶಿಬಿರ ಮತ್ತು  ಬ್ಲಡ್ ಡೋನರ್ಸ್ ಮಂಗಳೂರು ಮತ್ತು ವೆನ್ಲಾಕ್ ಆಸ್ಪತ್ರೆ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಜನವರಿ 14ರಂದು ವಿಟ್ಲ ಪುತ್ತೂರು ರಸ್ತೆಯ ಬ್ರೈಟ್ ಅಡಿಟೋರಿಯಂ ನಲ್ಲಿ ನಡೆಯಲಿದೆ‌.

ಡಾ. ವಿ.ಕೆ ಅಬ್ದುಲ್ ಬಶೀರ್ ನೇತೃತ್ವದಲ್ಲಿ ಸುಮಾರು 20ಕ್ಕಿಂತಲೂ ಅಧಿಕ ತಜ್ಞರಿಂದ ಆರೋಗ್ಯ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ECG, ಹೃದಯ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ, ಕ್ಯಾನ್ಸರ್ ರೋಗದ ತಪಾಸಣೆ ಮತ್ತು ಚಿಕಿತ್ಸೆ, ಕಿಡ್ನಿ ಮತ್ತು ಮೂತ್ರಕೋಶ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ, ಕಣ್ಣಿನ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ ಮತ್ತು ಕಂಪ್ಯೂಟರ್ ರೈಸ್ಡ್, ಕಣ್ಣಿನ ಪರೀಕ್ಷೆ, ದಂತ ವೈದ್ಯರಿಂದ ತಪಾಸಣೆ ಮತ್ತು ಚಿಕಿತ್ಸೆ, ಸ್ತ್ರೀ ರೋಗ ಮತ್ತು ಗರ್ಭಿಣಿ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ, ಸೇರಿದಂತೆ ಮೊದಲಾದ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ಸೌಲಭ್ಯ ಲಭ್ಯವಾಗಲಿದೆ.

Leave a Reply

Your email address will not be published. Required fields are marked *

error: Content is protected !!