ಪಾಟ್ರಕೋಡಿ ಮುಹಿಯುದ್ದೀನ್ ಜುಮಾ ಮಸೀದಿ ಪಾಟ್ರಕೋಡಿ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಹಾಜಿ ಇಬ್ರಾಹಿಂ ಭಾತೀಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತಸ್ರೀಫ್ ಟಿ ಅಯ್ಕೆ
ಪಾಟ್ರಕೋಡಿ ಮುಹಿಯುದ್ದೀನ್ ಜುಮಾ ಮಸೀದಿ ಇದರ ವಾರ್ಷಿಕ ಮಹಾಸಭೆಯು ಅದ್ಯಕ್ಷರಾದ ಉಮ್ಮರ್ ಹಾಜಿ ಕರಿಮಜಲುರವರ ಅಧ್ಯಕ್ಷತೆಯಲ್ಲಿ ಜರುಗಿತ್ತು
ಜುಮ್ಮಾ ಮಸೀದಿಯ ಖತೀಬರಾದ ಬಹುಮಾನ್ಯ ಖಲಂದರ್ ಶಾಫಿ ಬಾಖವಿ ಅಲ್ ಮಾನ್ನಾನಿರವರು ದುವಾ ಪ್ರಾಥನೆಯ ನಂತರ ಮಾತನಾಡುತ್ತಾ ಮಸೀದಿ ಸಮಿತಿಗೆ ಇಸ್ಲಾಂ ತತ್ವಾದರ್ಶಗಳನ್ನು ಪರಿಪಾಲಿಸುವ ಹಾಗು ಮಸೀದಿಯ ಬಗ್ಗೆ ಅಪಾರ ಗೌರವವಿರುವವರನ್ನು ಸದಸ್ಯರಾಗಿ ಆರಿಸುವುದು ಉತ್ತಮವೆಂದು ನುಡಿದರು.
ಈ ಮಹಾಸಭೆಯಲ್ಲಿ, ಜಮಾಹತ್ ಕಮಿಟಿಯಲ್ಲಿ ಹಲವಾರು ವರ್ಷಗಳ ಕಾಲ ಸಕ್ರಿಯ ಕಾರ್ಯಕರ್ತರಾಗಿ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿರುವ ಹಾಜಿ ಇಬ್ರಾಹಿಂ ಭಾತೀಷ ರವರನ್ನು ನೂತನ ಕಮಿಟಿಗೆ ಅದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಮಾಡಲಾಯಿತು.
2024 ನೇ ಸಾಲಿನ ನೂತನ ಸಮಿತಿಯ ಪದಾಧಿಕಾರಿಯಾಗಿ
ಅದ್ಯಕ್ಷರು : ಹಾಜೀ ಇಬ್ರಾಹಿಂ ಭಾತೀಷ
ಪ್ರಧಾನ ಕಾರ್ಯದರ್ಶಿ: ತಶ್ರೀಫ್ ಟಿ.
ಉಪಾಧ್ಯಕ್ಷರು :ಕಾಸಿಂ ಪಿ
ಕಾರ್ಯದರ್ಶಿ: ಅಬ್ದುಲ್ ಲತೀಫ್
ಕೋಶಾಧಿಕಾರಿ: ಹಾಜಿ ಹಮೀದ್ ಕೋಡಿ
ಸದಸ್ಯರು : ಹಾಜಿ ಮಹಮದ್ ಮಾಸ್ಟರ್, ಕೆ ಎಸ್. ಯೂಸುಫ್, ಹಾಜಿ ಉಮ್ಮರ್, ರಝಾಕ್ ಸನ್ಮಾನ್, ಅಬ್ಬಾಸ್ ಕೆ., ಬಶೀರ್ ಪಿ. ಉಸ್ಮಾನ್ ಬಾಯಬೆ, ಮಹಮ್ಮದ್ ರಫೀಕ್, ಹಾಜಿ ಸುಲೈಮಾನ್ ಬಾಯಬೆ, ಹಾಜಿ ಮುನೀರ್, ಅಬ್ದುಲ್ ಖಾದರ್ ಮುಸ್ಲಿಯಾರ್, ಅಬ್ದುಲ್ ರಹಿಮಾನ್ ಕೆ., ಮಜೀದ್ ಬಿ.ಎಚ್. ಮಹಮ್ಮದ್ ಶರೀಫ್ ಟಿ., ಉಸ್ಮಾನ್ ಎಮ್.ಎಚ್ ರವರನ್ನು ಆರಿಸಲಾಯಿತು.
ಪ್ರದಾನ ಕಾರ್ಯದರ್ಶಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದವನ್ನು ಅರ್ಪಿಸಿದರು.
ವರದಿ ಅಬ್ದುಲ್ ಖಾದರ್ ಪಾಟ್ರಕೋಡಿ






