ಖಾಸಗಿ ಶಾಲಾ ಬಸ್ ಡ್ರೈವರ್ನ ಹುಚ್ಚಾಟಕ್ಕೆ 8ನೇ ತರಗತಿಯ ವಿದ್ಯಾರ್ಥಿನಿ ಬಲಿ
ಚಿಕ್ಕಮಗಳೂರು: ಅಜ್ಜಂಪುರ ಖಾಸಗಿ ಶಾಲಾ ಬಸ್ ಡ್ರೈವರ್ನ ಪ್ರೇಮ ಪಾಶಕ್ಕೆ ಸಿಲುಕಿದ 8ನೇ ತರಗತಿ ವಿದ್ಯಾರ್ಥಿನಿ, ಹೊಸ ವರ್ಷದ ದಿನವೇ ಅಂಕಲ್ ಜೊತೆಗೆ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ್ದಾಳೆ.
ಬಸ್ನ ಡ್ರೈವರ್ ಅಂಕಲ್ ತನ್ನ ಮಗಳ ವಯಸ್ಸಿನ 8ನೇ ತರಗತಿ ವಿದ್ಯಾರ್ಥಿನಿಯನ್ನು ಪ್ರೇಮಪಾಶಕ್ಕೆ ಬೀಳಿಸಿಕೊಂಡಿದ್ದಾನೆ. ನಂತರ, ಆ ಹುಡುಗಿಯನ್ನು ಮನೆಯಿಂದ ಕರೆದುಕೊಂಡು ಹೋಗಿ ಹೊಸ ವರ್ಷದ ದಿನವೇ ರೈಲಿಗೆ ಅಡ್ಡನಿಂತು ಇಬ್ಬರೂ ಪ್ರಾಣ ಬಿಟ್ಟಿರುವ ದುರ್ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ರೈಲಿಗೆ ಅಡ್ಡಲಾಗಿ ನಿಂತು ಡ್ರೈವರ್ ಸಂತೋಷ (38) ವಿದ್ಯಾರ್ಥಿನಿ ಜಾನವಿ (14) ಮೃತಪಟ್ಟಿದ್ದಾರೆ. ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 8ನೇ ತರಗತಿ ವಿದ್ಯಾರ್ಥಿನಿ ಜಾನವಿಯನ್ನ ಆಕೆಯ ಶಾಲೆಯ ಬಸ್ ಡ್ರೈವರ್ ಪ್ರೀತಿಸುವಂತೆ ಪೀಡಿಸುತ್ತಿದ್ದನು.
ಈ ಬಗ್ಗೆ ವಿದ್ಯಾರ್ಥಿನಿ ಮನೆಯಲ್ಲಿ ಪೋಷಕರೊಂದಿಗೆ ಹೇಳಿಕೊಂಡಿದ್ದಳು. ಕೂಡಲೇ ಪೋಷಕರು ಕೂಡ ಬಸ್ ಡ್ರೈವರ್ ಕಿರುಕುಳದ ಬಗ್ಗೆ ಶಾಲೆಯ ಮುಖ್ಯಸ್ಥರ ಬಳಿ ದೂರು ನೀಡಿದ್ದರು.





