ಉಡುಪಿ: ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತ ಶಬ್ಬೀರ್ ಹುಸೈನ್ ಸಾಹೇಬ್ ನಿಧನ
ಪಡುಬಿದ್ರಿ: ಪಡುಬಿದ್ರಿಯ ದೀನ್‌ಸ್ಟ್ರೀಟ್ ನಿವಾಸಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಶಬ್ಬೀರ್ ಹುಸೈನ್ ಸಾಹೇಬ್ (77) ಜ.1ರಂದು ಹೃದಯಾಘಾತದಿಂದ ನಿಧನ ಹೊಂದಿದರು.
ಪಡುಬಿದ್ರಿ ಉರ್ದು ಶಾಲೆಯ ಸಂಚಾಲಕರಾಗಿ ಉರ್ದು ಶಾಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದ ಇವರು ಹಿಮಾಯತುಲ್ ಇಸ್ಲಾಂ ಸಂಘದ ಅಧ್ಯಕ್ಷರಾಗಿ, ಜಮೀಯತುಲ್ ಫಲಾಹ್ ಕಾಪು ಘಟಕದ ಉಪಾಧ್ಯಕ್ಷರಾಗಿ, ಪಡುಬಿದ್ರಿ ಜುಮ್ಮಾ ಮಸೀದಿ ಸಮಿತಿಯ ಮಾಜಿ ಉಪಾಧ್ಯಕ್ಷ, ದೀನ್‌ಸ್ಟೀಟ್‌ನಲ್ಲಿರುವ ನೂರಾನಿಯಾ ಹನಫಿ ಜಾಮಿಯಾ ಮಸೀದಿಯ ಸಲಹೆಗಾರರಾಗಿ, ಕರ್ನಾಟಕ ಮುಸ್ಲಿಮ್ ಜಮಾಅತ್‌ನಲ್ಲಿ ಕಾರ್ಯನಿರ್ವಹಿಸಿದ್ದರು.
ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಇವರನ್ನು ಸಮಾಜ ಸೇವಾ ಕ್ಷೇತ್ರದಲ್ಲಿ 2017ರಲ್ಲಿ ಉಡುಪಿ ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದು, ಆಭಿಮಾನ ಬಳಗವನ್ನು ಹೊಂದಿದ್ದರು. ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳನ್ನು ಇವರು ಅಗಲಿದ್ದಾರೆ.





