March 18, 2026

ವಿಟ್ಲ: ಬೊಳಂತಿಮೊಗರು ಶಾಲೆಯಲ್ಲಿ ವಿದ್ಯೋಲ್ಲಾಸ-ಪ್ರತಿಭಾಸಿಂಚನ ಕಾರ್ಯಕ್ರಮ

0
IMG-20231226-WA0010.jpg

ವಿಟ್ಲ: ಬೊಳಂತಿಮೊಗರು ದ.ಕ ಜಿ.ಪಂ ಹಿರಿಯ ಪ್ರಾಥಮಿಕ (ಕನ್ನಡ) ಮತ್ತು ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯೋಲ್ಲಾಸ-ಪ್ರತಿಭಾಸಿಂಚನ ಕಾರ್ಯಕ್ರಮ ನಡೆಯಿತು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ, ಮಾತನಾಡಿ ಶಾಲೆಯನ್ನು ತನ್ನ ಮನೆಯಂತೆ ನೋಡುವ ಶಿಕ್ಷಕರು ಶಾಲೆಯಲ್ಲಿದ್ದರೆ ಶಾಲೆಯ ಅಭಿವೃದ್ಧಿ ಸಾಧ್ಯ. ಸರಕಾರಿ ಶಾಲೆಯನ್ನು ಉಳಿಸುವ ಕಾರ್ಯವಾಗಬೇಕು. ಸರಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ಬೇಡ. ಸರಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಕಾರ್ಯವಾಗಬೇಕು. ಸಮಾಜದೊಂದಿಗೆ ಬೆರೆತು ಬಾಳಿದಾಗ ಜೀವನಕ್ಕೆ ಅರ್ಥ ಬರುತ್ತದೆ. ಒಳ್ಳೆಯ ವಾತಾವರಣದಲ್ಕಿ ಮಕ್ಕಳನ್ನು ಬೆಳೆಸಬೇಕು ಎಂದು ತಿಳಿಸಿದರು.

ಪ್ರೌಢ ಶಾಲಾ ವಿಭಾಗದ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯೋಲ್ಲಾಸ – ಪ್ರತಿಭಾ ಸಿಂಚನ ಕಾರ್ಯಕ್ರಮದಲ್ಲಿ ವೀಣಾ ಗಿರಿಯಪ್ಪ ಗೌಡ, ಪಾರ್ವತಿ ಜಗದೀಶ್ಚಂದ್ರ ಗೌಡ, ಪುರಂದರ ಅಂಚನ್, ರವಿ ಅಂಚನ್, ರಾಜೇಶ್ ಮೊಂತೆರೋ, ಸಂಧ್ಯಾರಾಣಿ, ಹರೀಶ್. ವಿ ಮಾಡ. ಶ್ರೀ ವಿಠಲ ನಾಯಕ್, ಸಂಜೀವ ಎಚ್, ನಾರಾಯಣ ಗೌಡ, ಪುರಂದರ ಅಂಚನ್, ವಿಶ್ವನಾಥ ಎನ್, ಅಬ್ದುಲ್ ರಹಿಮಾನ್ ನೆಲ್ಲಿಗು, ಜಗದೀಶ್ಚಂದ್ರ ಗೌಡ, ಹರಿಚರಣ್ ಪಳೇರಿ, ಜಯಂತ ಪೊನ್ನೆ ತ್ತಡಿ, ಶ್ರೀಮತಿ ವನಿತಾ ಮಾಮೇಶ್ವರ ಅವರನ್ನು ಸನ್ಮಾನಿಸಲಾಯಿತು.

ಜನರಲ್ ಸರ್ಜರಿ ಡಾ. ನಿಖಿಲ್ ಕುಮಾರ್ ನಾಯ್ತೋಟ್ಟು, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರಾದ ಕರುಣಾಕರ ನಾಯ್ತೊಟ್ಟು ಲತಾ ಅಶೋಕ ಪೂಜಾರಿ, ಡೀಕಯ್ಯ ಸುರುಳಿಮೂಲೆ, ಕ್ಷೇತ್ರ ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್ ಕೆ. ಮಾಜಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶೈಲಜಾ ಕೆ.ಟಿ ಭಟ್, ಪ್ರೌಢ ಶಾಲಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷ ಜಗದೀಶ್ಚಂದ್ರ ಗೌಡ ನಾಯ್ತೋಟ್ಟು, ಪ್ರಾಥಮಿಕ ಶಾಲಾ ವಿಭಾಗದ ಎಸ್ ಡಿ ಎಂಸಿ ಅಧ್ಯಕ್ಷ ಪುರಂದರ ಅಂಚನ್, ಎಸ್ ಡಿ ಎಂ.ಸಿ ಮಾಜಿ ಅಧ್ಯಕ್ಷ ವಿಶ್ವನಾಥ ಎನ್, ಜಯಂತ ಪೊನ್ನೆತ್ತಡಿ, ಪುರಂದರ ಇಂದ್ರ ಪಡ್ಪು , ನಿವೃತ್ತ ಸೈನಿಕ ಧನಂಜಯ ಗೌಡ ನಾಯ್ತೊಟ್ಟು, ಗಂಗಮ್ಮ ನಾಯ್ತೊಟ್ಟು, ಯಶೋಧ. ಕೆ, ರೇವತಿ ಕೋಡಿ ಮಜಲು ಉಪಸ್ಥಿತರಿದ್ದರು.
ಪುರಂದರ ಅಂಚನ್ ಸ್ವಾಗತಿಸಿದರು. ವಿಠಲ ನಾಯಕ್ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!