December 16, 2025

ಮಲ್ಪೆಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ: 8 ಮೀನುಗಾರರ ರಕ್ಷಣೆ

0
image_editor_output_image2103033324-1703235821827.jpg

ಉಡುಪಿ: ಮಲ್ಪೆಯಲ್ಲಿ ಮೀನುಗಾರಿಕಾ ಬೋಟ್ ಒಂದು ಮುಳುಗಡೆಗೊಂಡಿದ್ದು, ಅದರಲ್ಲಿದ್ದ 8 ಮೀನುಗಾರರ ರಕ್ಷಣೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಕಡೆಕಾರು ರಕ್ಷಾ ಅವರಿಗೆ ಸೇರಿದ ಮೀನುಗಾರಿಕಾ ಬೋಟ್ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ. ಬೋಟ್ ತಳ ಭಾಗಕ್ಕೆ ವಸ್ತು ತಗುಲಿ, ನೀರು ಒಳನುಗ್ಗಿ ಮುಳುಗಡೆಗೊಂಡಿದೆ.

ಈ ವೇಳೆ ಸಿಬ್ಬಂದಿ ವಯರ್ ಲೆಸ್ ಮೂಲಕ ಇತರ ಬೋಟ್ ಗಳಿಗೆ ತಿಳಿಸಿದಾಗ ಶ್ರೀ ಮೂಕಾಂಬಿಕಾ ಅನುಗ್ರಹ ಬೋಟ್ ಅವರು ರಕ್ಷಣೆ ಮಾಡಿದ್ದಾರೆ. ಈ ಬೋಟ್ ನಲ್ಲಿದ್ದ 8 ಮೀನುಗಾರರ ರಕ್ಷಣೆ ಮಾಡಲಾಗಿದೆ. ಘಟನೆಯಲ್ಲಿ ಸುಮಾರು 18 ಲಕ್ಷ ರೂಪಾಯಿ ನಷ್ಟ ಆಗಿದೆ.

Leave a Reply

Your email address will not be published. Required fields are marked *

error: Content is protected !!