April 21, 2024

ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಸೇಲಾದ ಮಿಚೆಲ್‌ ಸ್ಟಾರ್ಕ್‌

0

ದುಬೈ: ಐಪಿಎಲ್‌ 24 ಹರಾಜು ದುಬೈನಲ್ಲಿ ನಡೆಯುತ್ತಿದ್ದು ಆಸ್ಟ್ರೇಲಿಯಾ ತಂಡದ ವೇಗದ ಬೌಲರ್, ಆರ್ ಸಿ ಬಿ ತಂಡದ ಮಾಜಿ ಆಟಗಾರನಾಗಿದ್ದ ಮಿಚೆಲ್‌ ಸ್ಟಾರ್ಕ್‌ ಐಪಿಎಲ್‌ ಇತಿಹಾಸದಲ್ಲೇ ಹೆಚ್ಚಿನ ಮೊತ್ತಕ್ಕೆ ಸೇಲಾದ ಆಟಗಾರನಾಗಿದ್ದಾನೆ.

ಮಿಚೆಲ್‌ ಸ್ಟಾರ್ಕ್‌ಗೆ ಎಲ್ಲ ತಂಡಗಳ ನಡುವೆ ಬಿಗ್ ಬಿಡ್ ನಡೆದಿದ್ದು ಕೆಕೆಆರ್‌ ತಂಡ 24 ಕೋಟಿ 75 ಲಕ್ಷ ಕೊಟ್ಟು ಸ್ಟಾರ್ಕ್‌ನ ತಮ್ಮ ತಂಡಕ್ಕೆ ಖರೀದಿ ಮಾಡಿದೆ.

2 ಕೋಟಿ ಮೂಲಬೆಲೆ ಹೊಂದಿದ್ದ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಖರೀದಿಗೆ ಡೆಲ್ಲಿ-ಮುಂಬೈ-ಕೆಕೆಆರ್-ಗುಜರಾತ್ ನಡುವೆ ಭರ್ಜರಿ ಫೈಟ್ ನಡೆಯಿತು. ಇವರು ಅಂತಿಮವಾಗಿ ಬರೋಬ್ಬರಿ 24.75 ಕೋಟಿಗೆ ಸೇಲಾದರು.

ಇದರ ಮೊದಲು ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್‌ಗೆ 20.50 ಕೋಟಿ ರೂಪಾಯಿ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದ ಗರಿಷ್ಠ ಬಿಡ್ಡಿಂಗ್ ಆಗಿದ್ದು ಆದರೆ ಕೆಲವೇ ಹೊತ್ತಲ್ಲಿ ಸ್ಟಾರ್ಕ್ಎಲ್ಲಾ ದಾಖಲೆ ಮುರಿದಿದ್ದಾನೆ.

Leave a Reply

Your email address will not be published. Required fields are marked *

error: Content is protected !!