June 30, 2026

ಕಾರವಾರ: ಫೀಝ್ ಪಾವತಿಸದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿರಾಕರಣೆ

0
image_editor_output_image-1116561899-1702975265654.jpg

ಕಾರವಾರ: ಸೈಂಟ್ ಮೈಕಲ್ ಶಾಲೆಯಲ್ಲಿ ಡೊನೇಶನ್ ಫೀಝ್ ಪೂರ್ಣ ಪ್ರಮಾಣದಲ್ಲಿ ಪಾವತಿಸದ ವಿದ್ಯಾರ್ಥಿಗಳನ್ನು ಶಾಲಾ ಟೆಸ್ಟ್ ನಿಂದ ಹೊರಗಿಟ್ಟ ಘಟನೆ ಮಂಗಳವಾರ ನಡೆದಿದೆ.

ನಗರದ ಖಾಸಗಿ ಶಾಲೆ ಸೈಂಟ್ ಮೈಕಲ್ ಗೆ ವಿದ್ಯಾರ್ಥಿಗಳ ಪೋಷಕರು ಶಾಲೆಯ ಡೊನೇಷನ್ ಶುಲ್ಕ ಪಾವತಿಸದಕ್ಕೆ ವಿದ್ಯಾರ್ಥಿಗಳಿಗೆ ಉಪ ಪರೀಕ್ಷೆ ಬರೆಯಲು ನಿರಾಕರಿಸಿದ್ದಲ್ಲದೇ, ಮುಖ್ಯೋಪಾಧ್ಯಾಯರ ಕೊಠಡಿಯ ಹೊರಗೆ ವಿದ್ಯಾರ್ಥಿಗಳನ್ನು ಕೂರಿಸಿ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ನಗರದ ಸರ್ಕಾರಿ ಅನುದಾನ ರಹಿತ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ನೆಡೆದಿದೆ.

ಮುಖ್ಯಶಿಕ್ಷಕಿ ಕ್ರಿಸ್ಟಿನಾ ಜೋಸೆಪ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯದಂತೆ ತಡೆದಿದ್ದಾರೆ. ಫಾರ್ಮೆಟಿವ್ ಅಸೈನ್ಮೆಂಟ್ ಎಂಬ ಪರೀಕ್ಷೆ ಬರೆಯಲು 6,7 ಮತ್ತು 8 ನೇ ತರಗತಿಯ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುಳಿತು ಕೊಳ್ಳಲು ನಿರಾಕರಣೆ ಮಾಡಲಾಗಿದೆ‌.

Leave a Reply

Your email address will not be published. Required fields are marked *

You may have missed

error: Content is protected !!