ಮದ್ಯ ಸೇವಿಸುತ್ತಿದ್ದಾಗ ಆರಂಭವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ
ಮಂಡ್ಯ: ಕೌಟುಂಬಿಕ ವಿಚಾರವಾಗಿ ಮದ್ಯ ಸೇವಿಸುತ್ತಿದ್ದಾಗ ಶುರುವಾದ ಜಗಳ ಯುವಕನ ಹತ್ಯೆಯಲ್ಲಿ ಅಂತ್ಯವಾಗಿದೆ.
ಗುರುವಿಲಾಸ್ ಎಂಬ ಯುವಕನ ಕತ್ತು ಕುಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಮೈಷುಗರ್ ವೃತ್ತದಲ್ಲಿ ಗುರುವಾರ ರಾತ್ರಿ ನಡೆದಿದೆ.
ಮದ್ದೂರು ತಾಲೂಕಿನ ಕಡಿಲುವಾಗಿಲು ಗ್ರಾಮದ ಗುರು ವಿಲಾಸ್ (35) ಭೀಕರವಾಗಿ ಹತ್ಯೆಯಾದ ಯುವಕನಾಗಿದ್ದಾನೆ.
ಬಾರ್ ನಲ್ಲಿ ಮದ್ಯ ಕುಡಿದ ನಂತರ ಜೊತೆಯಲ್ಲಿ ಇದ್ದವರ ನಡುವೆ ಜಗಳ ನಡೆದಿದ್ದು, ಇದೇ ವೇಳೆ ಗುರುವಿಲಾಸ್ ಹತ್ಯೆ ನಡೆದಿದೆ.





