May 9, 2026

ಬಂಟ್ವಾಳ: ಕಾರಿನಲ್ಲಿ ದನಗಳ ಅಕ್ರಮ ಸಾಗಾಟ: ಆರೋಪಿಗಳು ಪರಾರಿ

0
image_editor_output_image831893257-1702278803738.jpg

ಬಂಟ್ವಾಳ: ಕಾರಿನಲ್ಲಿ ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಎಸ್ .ಐ.ರಾಮಕೃಷ್ಣ ನೇತೃತ್ವದ ತಂಡ ದನಗಳನ್ನು ರಕ್ಷಣೆ ಮಾಡಿದ್ದು, ಆರೋಪಿಗಳು ಪರಾರಿಯಾದ ಘಟನೆ ಲೊರೆಟ್ಟುಪದವು ಬಳಿ ನಡೆದಿದೆ.

ಲೊರೆಟ್ಟೊಪದವು ಸಮೀಪದ ಟಿಪ್ಪು ನಗರ ಎಂಬಲ್ಲಿ ಪೋಲೀಸರು ಬೆನ್ನಟ್ಟಿ ದನಗಳನ್ನು ವಶಪಡಿಸಿಕೊಂಡಿದ್ದಾರೆ.

ಓಮ್ನಿ ಕಾರಿನಲ್ಲಿ ಐದು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೈ ಕಾಲು ಕಟ್ಟಿ ತುಂಬಿಸಲಾಗಿತ್ತು.
ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!