March 18, 2026

ಉಳ್ಳಾಲ: ಕುಖ್ಯಾತ ಡ್ರಗ್ಸ್ ಪೆಡ್ಲರ್ ನ ಬಂಧನ

0
image_editor_output_image-670417412-1702305966880

ಮಂಗಳೂರು : ನಿಷೇದಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕುಖ್ಯಾತ ಡ್ರಗ್ಸ್‌ ಪೆಡ್ಲರ್‌ ನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಶಿತ್‌ ಅಲಿಯಾಸ್‌ ಅಶ್ವಿತ್‌(ಅಶು) ಎಂದು ಗುರುತಿಸಲಾಗಿದೆ.

ನಗರದ  ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್  ರವರ ನಿರ್ದೇಶನದಂತೆ, ಮಂಗಳೂರು ನಗರದ ಉಪ-ಪೊಲೀಸ್ ಆಯುಕ್ತರು ಸಿದ್ಧಾರ್ಥ ಗೋಯಲ್, ದಿನೇಶ್ ಕುಮಾರ್ ರವರ ಮಾರ್ಗದರ್ಶನದಂತೆ ಮಂಗಳೂರು ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ.ವಿ.ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಉಳ್ಳಾಲ ತಾಲೂಕು ಪೆರ್ಮನ್ನೂರು ಗ್ರಾಮದ ಸಂತೋಷನಗರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಷೇದಿತ ಮಾದಕ ವಸ್ತು ಸುಮಾರು 132 ಗ್ರಾಂ ತೂಕದ Methamphetamine ಮತ್ತು 250 LSD ಸ್ಟ್ಯಾಂಪ್ ಡ್ರಗ್ನ್ನು, ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡಲು ಬಂದಿದ್ದ ಶಿಶಿರ್ ದೇವಾಡಿಗ ಮತ್ತು ಶುಶಾನ್.ಎಲ್. ರವರನ್ನು ಪತ್ತೆ ಮಾಡಿ, ಅವರಿಗೆ ಮಾದಕ ವಸ್ತುವನ್ನು ನೀಡಿ ತಲೆಮರೆಸಿಕೊಂಡಿರುವ ಆರೋಪಿಯನ್ನುಕೋಟೆಕಾರು ಗ್ರಾಮದ ಮಾಡೂರು ಸಾಯಿ ಮಂದಿರದ ಸಮೀಪದ ಗ್ರೌಂಡ್ ಬಳಿ ಪತ್ತೆ ಮಾಡಿ ಪೊಲೀಸರು ಬಂಧಿಸಿದ್ದಾರೆ.

ಈತನ ವಶದಲ್ಲಿದ್ದ ಸುಮಾರು 100 ಗ್ರಾಂ ತೂಕದ ಎಂ.ಡಿ.ಎಂ.ಎ (ಮೌಲ್ಯ ರೂ.6,00,000) , 600 ಗ್ರಾಂ ತೂಕದ ಗಾಂಜಾ(ಮೌಲ್ಯ ರೂ.30,000/-)  ಡ್ಯೂಕ್ ಮೋಟಾರು ಸೈಕಲ್ (ಮೌಲ್ಯ ರೂ.1,00,000/-) ಮತ್ತಿತರ ಸೊತ್ತುಗಳು ಸೇರಿ ಒಟ್ಟು ಅಂದಾಜು ಮೌಲ್ಯ ರೂ.7,77,000-00 ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ.ಹೆಚ್.ಎನ್, ಉಳ್ಳಾಲ ಠಾಣಾ ಪಿಎಸ್ಐರವರುಗಳಾದ ಶೀತಲ್ ಅಲಗೂರ ಮತ್ತು, ಸಂತೋಷಕುಮಾರ್.ಡಿ. ಹಾಗೂ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪ-ವಿಭಾಗದ Anti-Drug Team ಪಿಎಸ್ಐ ಪುನಿತ್ ಗಾಂವ್ಕರ್, ಹಾಗೂ ಸಿಬ್ಬಂದಿಗಳಾದ ಹೆಡ್ಕಾನ್ಸ್ಟೇಬಲ್ಗಳಾದ ಸಾಜು ನಾಯರ್, ಮಹೇಶ್, ಸಿಬ್ಬಂದಿಗಳಾದ ಶಿವಕುಮಾರ್, ಅಕ್ಬರ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!