May 9, 2026

ಬಂಟ್ವಾಳ: ಅನಿಲ ಸೋರಿಕೆಯಾಗಿ ಮನೆ ಬೆಂಕಿಗಾಹುತಿ

0
image_editor_output_image-1332620212-1702111404502.jpg

ಬಂಟ್ವಾಳ: ಬಂಟ್ವಾಳ ತಾಲೂಕು ಪುದು ಗ್ರಾಮದ ಕಬೆಲ ನಿವಾಸಿ ಉಮೇಶ್ ಪೂಜಾರಿ ಯವರ ಬಾಡಿಗೆ ಮನೆಯಲ್ಲಿ ಬಾಡಿಗೆದಾರ ಹೊನ್ನಪ್ಪ ಗೌಡ ರವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆ ಯಾಗಿ ಗುರುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ.

ಗ್ಯಾಸ್ ಸೋರಿಕೆಯಾಗಿರುವುದು ತಿಳಿಯದೆ ರಾತ್ರಿ ಅಡುಗೆ ಮಾಡಲು ಗ್ಯಾಸ್ ಉರಿಸಲು ಹೋದಾಗ ಬೆಂಕಿ ಅವಘಡ ವಾಗಿದೆ. ಬಂಟ್ವಾಳ ಅಗ್ನಿ ಶಾಮಕದಳದವರು ಬೆಂಕಿ ಆರಿಸಿದರು. ಗ್ರಾಮಸ್ಥರು ಸಹಕರಿಸಿದರು.‌ಗ್ರಾಮ ಕರಣಿಕರಾದ ಅಶ್ವಿನಿ ಯವರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.

Leave a Reply

Your email address will not be published. Required fields are marked *

error: Content is protected !!