May 9, 2026

ಬಂಟ್ವಾಳ: ಮಗನ ಜೊತೆಯಲ್ಲಿ ಪೇಟೆಗೆ ಬಂದು ನಾಪತ್ತೆಯಾಗಿದ್ದ ವೃದ್ಧ ಪತ್ತೆ

0
image_editor_output_image1197737822-1702111627050.jpg

ಬಂಟ್ವಾಳ: ಮಗನ ಜೊತೆಯಲ್ಲಿ ಪೇಟೆಗೆ ಬಂದು ಕಾಣೆಯಾಗಿದ್ದ ವೃದ್ದರೋರ್ವರನ್ನು ಪತ್ತೆ ಹಚ್ಚಿದ ಪೋಲೀಸರು ಅವರನ್ನು ಆಸ್ಪತ್ರೆಗೆ ದಾಖಲು ಪಡಿಸಿದ ಘಟನೆ ನಡೆದಿದೆ.

ಕಾವಳ ಪಡೂರು ಗ್ರಾಮದ ವಗ್ಗ ಸಮೀಪದ ಕೆಲೆಂಜಕೋಡಿ ಮಾಂಗಜೆ ನಿವಾಸಿ ಜಾನ್ ವಾಸ್(88) ಕಾಣೆಯಾಗಿದ್ದ ವ್ಯಕ್ತಿ. ಅವರನ್ನು ಗೋರೆಮಾರ್ ಗುಡ್ಡವೊಂದರಲ್ಲಿ ಪತ್ತೆ ಹಚ್ಚಿದ ಪೋಲೀಸರು ಬಳಿಕ ಬಿ.ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಡಿಕೆ ಮಾರಾಟ ಮಾಡುವ ಉದ್ದೇಶದಿಂದ ಪೇಟೆಗೆ ಮಗನ‌ ಜೊತೆಗೆ ಬಂದಿದ್ದ ವೃದ್ದ ಜಾನ್ ವಾಸ್ ಅವರು ಡಿಸೆಂಬರ್ 6 ರಂದು ಬಿ.ಸಿ ರೋಡಿನ ‌ಕೈಕಂಬ ಎಂಬಲ್ಲಿಂದ ಕಾಣೆಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!