May 9, 2026

ಪುತ್ತೂರಿನಲ್ಲಿ ಹಾಲು ಸಂಸ್ಕರಣೆ, ಪ್ಯಾಕಿಂಗ್‌ ಘಟಕ ಸ್ಥಾಪನೆಗೆ ಜಾಗ ಮಂಜೂರು

0
image_editor_output_image1767643775-1702113372564.jpg

ಪುತ್ತೂರು: ಅತ್ಯಾಧುನಿಕ ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್‌ ಘಟಕ ಸ್ಥಾಪನೆಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ನಿಯಮಿತಕ್ಕೆ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದಲ್ಲಿ 9.20 ಎಕರೆ ಮಂಜೂರು ಮಾಡಲು ಸರಕಾರ ಅನುಮತಿ ನೀಡಿದೆ.

ದ.ಕ.ದಲ್ಲಿ ಸಂಗ್ರಹಗೊಳ್ಳುವ ಹಾಲನ್ನು ಪ್ರಸ್ತುತ ಮಂಗಳೂರಿನ ಕುಲಶೇಖರ ಡೈರಿಯಲ್ಲಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಗ್ರಹಗೊಂಡ ಹಾಲನ್ನು ಉಪ್ಪೂರಿನ ಡೈರಿಯಲ್ಲಿ ಸಂಸ್ಕರಿಸಿ ಪ್ಯಾಕಿಂಗ್‌ ಮಾಡಿ ಸರಬರಾಜು ಮಾಡಲಾಗುತ್ತಿದೆ.

ಪುತ್ತೂರಿನಲ್ಲಿ ಡೈರಿ ತೆರೆದು ಪ್ರತೀ ದಿನ 1.5 ಲಕ್ಷ ಲೀಟರ್‌ ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್‌ ಕಾರ್ಯ ನಡೆಸಲು ಉದ್ದೇಶಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!