ಲಾರಿ, ಟಾಟಾ ಏಸ್ ವಾಹನಗಳ ನಡುವೆ ಅಪಘಾತ: ನಾಲ್ವರು ಸಾವು
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್ ಬಳಿ ಲಾರಿ ಹಾಗೂ ಟಾಟಾ ಏಸ್ ವಾಹನಗಳ ನಡುವೆ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ.
ಟಾಟಾ ಏಸ್‌ನಲ್ಲಿದ್ದ ಅಂಬರೀಶ್ (30) ರಮೇಶ್ (28) ರವಿ (20) ಚಾಲಕ ಇಸ್ಮಾಯಿಲ್ (27) ಮೃತಪಟ್ಟವರು. ಈ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಓರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಅಪಘಾತದಲ್ಲಿ ಇನ್ನೋರ್ವನಿಗೆ ಗಂಭೀರ ಗಾಯಗಳಾಗಿದ್ದು ಸಿಂಧನೂರು ತಾಲೂಕಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.




