May 9, 2026

ಮಂಗಳೂರು: ಜಪ್ಪು ಮಾರ್ನಮಿಕಟ್ಟೆಯಲ್ಲಿ ಸರಣಿ ಅಪಘಾತ: ಮೂರು ಕಾರು, ಒಂದು ಸ್ಕೂಟರ್‌ ಜಖಂ

0
image_editor_output_image-588634125-1701932887220.jpg

ಮಂಗಳೂರು: ಮಂಗಳೂರು ನಗರದ ಜಪ್ಪು ಮಾರ್ನಮಿಕಟ್ಟೆಯಲ್ಲಿ ಬುಧವಾರ ರಾತ್ರಿ ಸರಣಿ ಅಪಘಾತ ಸಂಭವಿಸಿದ್ದು, ಮೂರು ಕಾರು ಮತ್ತು ಒಂದು ಸ್ಕೂಟರ್‌ ಜಖಂಗೊಂಡಿವೆ.

ಘಟನೆಗೆ ಸಂಬಂಧಿಸಿ ಓರ್ವ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೇರಳ ನೊಂದಾಯಿತ ಕಾರನ್ನು ಅದರ ಚಾಲಕ ಅತಿ ವೇಗ ಹಾಗೂ ಅಜಾಗ್ರತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಎರಡು ಕಾರು ಹಾಗೂ ಒಂದು ಸ್ಕೂಟರ್ ಗೆ ಢಿಕ್ಕಿ ಹೊಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೇರಳ ನೊಂದಾಯಿತ ಕಾರಿನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕಾರು ಚಾಲಕ ಮದ್ಯಪಾನ ಸೇವಿಸಿದ್ದನೆಂಬ ಆರೋಪ ಕೇಳಿ ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!