March 26, 2026

ವಿಟ್ಲ: ಹಳೆ ದ್ವೇಷದಿಂದ ವ್ಯಕ್ತಿ ಮೇಲೆ ಹಲ್ಲೆ:
ವಿಚಾರಿಸಲು ಹೋದ ತಾಯಿ ಮೇಲೆ ಹಲ್ಲೆಗೆ ಯತ್ನ, ಮಹಿಳೆ ಮೇಲೆ ಮಾನಭಂಗ ಯತ್ನ

0
IMG-20220615-WA0046

ವಿಟ್ಲ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರ ತಂಡ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಕೇಳಲು ಹೋದ ತಾಯಿ ಮತ್ತು ಪತ್ನಿಗೆ ಹಲ್ಲೆ ನಡೆಸಲು ಮುಂದಾಗಿ, ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ಇಬ್ಬರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಬೈದುಲ್ಲಾ (35) ಎಂಬವರು ಹಲ್ಲೆಗೊಳಗಾದ ವ್ಯಕ್ತಿ. ಉಬೈದುಲ್ಲ ಅವರು ಕೊಳ್ನಾಡು ಗ್ರಾಮದ ಸಾಲೆತ್ತೂರು ಮೈದಾನದ ಬಳಿ ತನ್ನ ಸಂಬಂದಿಕರೊಂದಿಗೆ ಹೋದಾಗ, ಅಲ್ಲಿದ್ದ ಆರೋಪಿಗಳಾದ ಅಬ್ದುಲ್‌ ಖಾದರ್‌ ಮತ್ತು ಬಶೀರ್‌ ಎಂಬವರು ಹಳೆ ದ್ವೇಷದಿಂದ ಉಬೈದುಲ್ಲ ಅವರ ಕಾಲರ್ ಪಟ್ಟಿಯನ್ನು ಹಿಡಿದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಎದೆಗೆ ಹಲ್ಲೆ ನಡೆಸಿದ್ದಾರೆ.

ಆರೋಪಿಗಳಾದ ಅಬ್ದುಲ್‌ ಖಾದರ್‌ ಮತ್ತು ಬಶೀರ್ ರವರಲ್ಲಿ, ತನ್ನ ಮಗನಿಗೆ ಯಾಕೆ ಬೈದು ಹಲ್ಲೆ ಮಾಡಿದ್ದು ಎಂದು ಕೇಳಿದಕ್ಕೆ ಆರೋಪಿ ಬಶೀರನು ಉಬೈದುಲ್ಲ ತಾಯಿಯನ್ನುದ್ದೇಶಿಸಿ ಅವ್ಯಾಚವಾಗಿ ಬೈದು, ನಿನ್ನ ಮಗನನ್ನು ಕೊಲ್ಲುತ್ತೇವೆ ಎಂದು ಹೇಳಿ ಹೊಡೆಯಲು ಬಂದಿದ್ದು, ಈ ವೇಳೆ ಉಬೈದುಲ್ಲಾ ಆತನ ಪತ್ನಿ ತಾಯಿಗೆ ಹೊಡೆಯುವುದನ್ನು ತಡೆಯಲು ಹೋದಾಗ, ಬಶೀರ್‌ ನು ಉಬೈದುಲ್ಲಾ ಹೆಂಡತಿಯೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ಪ್ರಕರಣ ದಾಜಕಲಾಗಿರುತ್ತದೆ‌‌.

Leave a Reply

Your email address will not be published. Required fields are marked *

error: Content is protected !!