March 26, 2026

ಆಸೆ, ಆಮಿಷಗಳಿಗಾಗಿ ಹಿಂದೂ ಧರ್ಮವನ್ನು ತೊರೆಯಬೇಡಿ: ನಟಿ ಮಳವಿಕಾ

0
image_editor_output_image-1486570163-1701699046166.jpg

ಪುತ್ತೂರು: ಧರ್ಮ ತೊರೆಯುವ ಯುವತಿಯರು ತಮ್ಮ ಭವಿಷ್ಯದ ಕುರಿತು ಗಂಭೀರ ಚಿಂತನೆ ಮಾಡಬೇಕು ಎಂದು ಚಲನಚಿತ್ರ ನಟಿ ಮಾಳವಿಕಾ ಅವಿನಾಶ್ ಮಹಿಳೆಯರಿಗೆ ಕರೆ ನೀಡಿದರು.

ಅವರು ಮಹಿಳಾ ಸಮನ್ವಯ ಪುತ್ತೂರು ಜಿಲ್ಲೆ ಮತ್ತು ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಸಹಯೋಗದಲ್ಲಿ ನಿನ್ನೆ ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ‘ನಾರೀ ಶಕ್ತಿ ಸಂಗಮ’ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಿವಿಧ ಆಸೆ, ಆಮಿಷಗಳಿಗೊಳಗಾಗಿ ಯುವತಿಯರು ತಮ್ಮ ಧರ್ಮವನ್ನು ತೊರೆದು ಅನ್ಯ ಧರ್ಮದ ಕಟ್ಟುಪಾಡಿಗೊಳಗಾಗುವ ಮೊದಲು ತಮ್ಮ ಭವಿಷ್ಯದ ಬಗ್ಗೆ ಗಂಭೀರ ಚಿಂತನೆಯನ್ನು ಮಾಡಬೇಕು. ಅನ್ಯ ಧರ್ಮೀಯರನ್ನು ವಿವಾಹವಾಗುವ ಹಿಂದೂ ಯುವತಿ ತನ್ನ ಸಮಾನ ಹಕ್ಕುಗಳಿಂದ ವಂಚಿತಳಾಗುತ್ತಾಳೆ, ಮಹಿಳೆಯರು ಪ್ರಜ್ಞಾವಂತಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!