May 9, 2026

ಬಂಟ್ವಾಳ: ಬಿಕ್ಷಾಟನೆ ನಡೆಸುತ್ತಿದ್ದ ಅಪರಿಚಿತ ವ್ಯಕ್ತಿ ಸಂಶಯಾಸ್ಪದವಾಗಿ ಸಾವು: ವಾರಸುದಾರರ ಪತ್ತೆಗೆ ಪೊಲೀಸ್ ಇಲಾಖೆ ಮನವಿ

0
IMG-20231202-WA0020.jpg

ಬಂಟ್ವಾಳ: ಬಿಕ್ಷಾಟನೆ ನಡೆಸುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು, ಈತನ ವಾರಸುದಾರರ ಪತ್ತೆಗೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಕಳೆದ 20 ವರ್ಷಗಳಿಂದ ಪಾಣೆಮಂಗಳೂರು ಪೇಟೆಯಲ್ಲಿ ಭಿಕ್ಷಾಟನೆ ನಡೆಸುತ್ತಿದ್ದ ಅಪರಿಚಿತ, ಊರು ಹೆಸರು ಗೊತ್ತಿಲ್ಲದ. ವ್ಯಕ್ತಿಯೋರ್ವನ ಮೃತದೇಹ ತೋಡಿನಲ್ಲಿ ತೇಲಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸುಮಾರು 70 ಪ್ರಾಯದ ಈ ವ್ಯಕ್ತಿ ಪಾಣೆಮಂಗಳೂರು ಸ್ಮಶಾನದ ಬಳೊ ಬಳಿ ಟೆಂಟ್ ಹಾಕಿದ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ಧ. ಡಿ.29 ರಂದು ವ್ಯಕ್ತಿಯ ಮೃತದೇಹ ಪಾಣೆಮಂಗಳೂರು ನೇತ್ರಾವತಿ ನದಿಯಿಂದ ಬರುವ ನೀರಿನ ತೋಡಿನಲ್ಲಿ ಕವಚಿ ಹಾಕಿದ ಸ್ಥಿತಿಯಲ್ಲಿ ತೇಲಿಕೊಂಡಿತ್ತು‌.

ಇನ್ನು ಮೃತದೇಹದ ಕೈಗಳನ್ನು ಬಟ್ಟೆಯಿಂದ ಸಡಿಲವಾಗಿ ಕಟ್ಟಿಕೊಂಡಿದ್ದು, ಕುತ್ತಿಗೆಗೆ ಬಟ್ಟೆಯಿಂದ ಸುತ್ತಿಗೆ ಹಾಗೆ ಕಂಡು ಬಂದಿತ್ತು. ಈತ ನೀರಿಗೆ ಆಕಸ್ಮಿಕವಾಗಿ ಬಿದ್ದು ‌ಸತ್ತಿರಬಹುದಾ? ಅಥವಾ ಇನ್ಯಾವುದೇ ಕಾರಣದಿಂದ ‌ಸಾವನ್ನಪ್ಪಿರಬಹುದಾ ಎಂಬುದು ತಿಳಿಯ ಬೇಕಾಗಿದೆ. ಆದರೆ ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ಪತ್ತೆಯಾಗುವ ಹಿನ್ನೆಲೆಯಲ್ಲಿ ‌ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.

ಮೃತದೇಹದ ಗುರುತು‌ಪತ್ತೆಯಾದರೆ ಬಂಟ್ವಾಳ ನಗರ ಪೋಲೀಸ್ ಠಾಣೆಯನ್ನು ಸಂಪರ್ಕ ಮಾಡಲು ಪೋಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!