ಎನ್ ಎಮ್ ಹೆಲ್ಪ್ ಲೈನ್ ಬೋಳಿಯಾರ್ ಇದರ ಲೋಗೋ ಬಿಡುಗಡೆ ಹಾಗೂ ಅಧಿಕೃತ ಚಾಲನಾ ಕಾರ್ಯಕ್ರಮ

ಬೋಳಿಯಾರ್: ಸಾಮಾಜಿಕ ಸೇವೆಯ ಸದುದ್ದೇಶದೊಂದಿಗೆ ಕಾರ್ಯಚರಿಸುವ ನಿಟ್ಟಿನಲ್ಲಿ ಪ್ರಾರಂಭಗೊಂಡ ಎನ್ ಎಮ್ ಹೆಲ್ಪ್ ಲೈನ್ ಸಂಘಟನೆಯ ಅಧಿಕೃತ ಚಾಲನಾ ಕಾರ್ಯಕ್ರಮವು ಅಧ್ಯಕ್ಷರಾದ ಅಝೀಝ್ ಮದಕರವರ ನೇತೃತ್ವದಲ್ಲಿ ಬೋಳಿಯಾರ್ ಸ್ವಾಗತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉಧ್ಘಾಟನೆಯನ್ನು ಮೊಹಿಯ್ಯದ್ದೀನ್ ಜುಮಾ ಮಸೀದಿ ಬೋಳಿಯಾರ್ ಇದರ ಖತೀಬರಾದ ಬಹುಮಾನ್ಯ ರಿಯಾಝ್ ರಹ್ಮಾನಿ ಉಸ್ತಾದರು ಪ್ರಾರ್ಥನೆಯ ಮೂಲಕ ನೆರೆವೇರಿಸುವುದರೊಂದಿಗೆ ಹಿತವಚನ ನೀಡಿದರು.
ಸಾಮಾಜಿಕ ಮುಂದಾಳು ಯುವನಾಯಕರಾದ ಅಶ್ರಫ್ ಮೋನು ಬೋಳಿಯಾರ್ ರವರು ಅತಿಥಿಗಳನ್ನು ಸ್ವಾಗತಿಸುವುದರೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಕೇಂದ್ರ ಬಿಂದು ಶಿಕ್ಷಣ ತಜ್ಞರಾದ ಜನಾಬ್ ರಫೀಕ್ ಮಾಸ್ಟರ್ ರವರು ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದ ಆಯೋಜನ ಸಮಿತಿ ಸಂಚಾಲಕರಾದ ರಹಿಮಾನ್ ಮಠ ಬೋಳಿಯಾರ್ ರವರು ಸಮರೋಪ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಪಾನೇಲ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ, ಯುವ ಉದ್ಯಮಿ ಟ್ರಾಸ್ಕಾಮ್ ಮಾಲಕರಾದ ಉಮರ್ ಶಮೀಮ್, ಎನ್ ಎಮ್ ಹೆಲ್ಪ್ ಲೈನ್ ಇದರ ಗೌರವಾಧ್ಯಕ್ಷರಾದ ಮನ್ಸೂರ್ ರಂತಡ್ಕ, ಬೋಳಿಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ರಂತಡ್ಕ, ಅಮ್ಮೆಂಬಳ ಜುಮಾ ಮಸೀದಿ ಇದರ ಅಧ್ಯಕ್ಷರಾದ ಉಬೈದ್ ಅಮ್ಮೆಂಬಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಸಫಿಯುಲ್ಲಾ ನಿರೂಪಿಸಿ ಕಬೀರ್ ರಂತಡ್ಕ ವಂದಿಸಿದರು.