ಕಡೂರು: ಪಿಕಪ್ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
ಕಡೂರು: ಸ್ಕೂಟರ್ ಗೆ ಪಿಕಪ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ದೊಡ್ಡಘಟ್ಟ ಗೇಟ್ ಬಳಿ ನಡೆದಿದೆ.
ಮೃತಪಟ್ಟ ಯುವಕನನ್ನು ಕಡೂರು ತಾಲೂಕಿನ ಬೀರೂರು ಪಟ್ಟಣದ ನಿವಾಸಿ ವಿನಾಯಕ್ (28) ಎಂದು ಗುರುತಿಸಲಾಗಿದೆ. ತರೀಕೆರೆಯಿಂದ ಕೆಲಸ ಮುಗಿಸಿ ಬೀರೂರಿಗೆ ವಾಪಸ್ಸು ಬರುವಾಗ ಅಪಘಾತವುಂಟಾಗಿದ್ದು, ಪಿಕಪ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.